ಶುಕ್ರವಾರ, ಮೇ 27, 2022
21 °C

ವಾಚಕರ ವಾಣಿ: ಮೊದಲೇ ಕ್ರಮ ಕೈಗೊಳ್ಳಲಿಲ್ಲವೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ಪ್ರಮುಖ ಆರೋಪಿ, ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಮಂಜುನಾಥ ಮೇಳಕುಂದಿ, ಕಳೆದ ಡಿಸೆಂಬರ್‌ನಲ್ಲಿ ಲೋಕೋಪಯೋಗಿ ಇಲಾಖೆಯ ಎಇ, ಜೆಇ ಪರೀಕ್ಷೆಯಲ್ಲಿ ಸಹ ಅಕ್ರಮ ನಡೆಸುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಆದರೆ ಆತ ತನ್ನ ಬಂಧನವನ್ನು ಮರೆಮಾಚಲು ನೀರಾವರಿ ಇಲಾಖೆಯಿಂದ 17 ದಿನಗಳ ವೈದ್ಯಕೀಯ ರಜೆ ಮಂಜೂರು ಮಾಡಿಸಿಕೊಂಡಿದ್ದುದಾಗಿ ವರದಿಯಾಗಿದೆ (ಪ್ರ.ವಾ., ಮೇ 9).

ಈ ಕುರಿತು ಸಹಜವಾಗಿ ಉದ್ಭವಿಸುವ ಪ್ರಶ್ನೆಗಳು: ಆಪಾದಿತ ಎಂಜಿನಿಯರ್ ಅನ್ನು ಬಂಧಿಸಿದ್ದ ವಿಷಯವನ್ನು ಪೊಲೀಸ್‌ ಇಲಾಖೆಯು ನೀರಾವರಿ ಇಲಾಖೆಗೆ ತಿಳಿಸಿರಲಿಲ್ಲವೇ ಅಥವಾ ನೀರಾವರಿ ಇಲಾಖೆಯ ಗಮನಕ್ಕೆ ಬಂದಿರಲಿಲ್ಲವೇ? ತಿಳಿಸಿದ್ದರೂ, ಗಮನಕ್ಕೆ ಬಂದಿದ್ದೂ, ಪ್ರಕರಣ ನಡೆದು ಐದು ತಿಂಗಳಾದರೂ ಆತನನ್ನು ಅಮಾನತಿನಲ್ಲಿ ಇಡದೆ, ಎರಡನೇ ಪ್ರಕರಣ ಭಾರಿ ಸದ್ದು ಮಾಡಿದ ನಂತರವಷ್ಟೇ ಅಮಾನತಿನಲ್ಲಿ ಇಟ್ಟಿದ್ದೇಕೆ? ಇದರಲ್ಲಿ ಈ ಎರಡೂ ಇಲಾಖೆಗಳ ಸಂಬಂಧಿತ ಅಧಿಕಾರಿಗಳು ಆಪಾದಿತನನ್ನು ರಕ್ಷಿಸಲು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ತಿಳಿಯುತ್ತದೆ. ಹಾಗೆಯೇ, ಆಪಾದಿತ ಅಧಿಕಾರಿಗೆ ಪ್ರಭಾವಿಗಳ ಸಖ್ಯವಿದೆ ಎಂಬುದು ಖಚಿತವಾಗುತ್ತದೆ. ಮೊದಲ ಪ್ರಕರಣದಲ್ಲಿ ಬಂಧಿತನಾಗಿದ್ದಾಗಲೇ ಆತನನ್ನು ಅಮಾನತಿನಲ್ಲಿರಿಸಿ, ವಿಚಾರಣೆಗೆ ಒಳಪಡಿಸಿದ್ದರೆ, ಎರಡನೇ ಹಗರಣದಲ್ಲಿ ಧೈರ್ಯವಾಗಿ ಆತ ಮೂಗು ತೂರಿಸುತ್ತಿರಲಿಲ್ಲ. ಆದ್ದರಿಂದ,  ವಿಳಂಬ ನೀತಿ ಅನುಸರಿಸಿ ಕರ್ತವ್ಯಲೋಪ ಎಸಗಿರುವ ಸಂಬಂಧಿಸಿದ ಇತರ ನೌಕರರನ್ನೂ ಅಮಾನತಿನಲ್ಲಿ ಇಟ್ಟು, ವಿಚಾರಣೆ ನಡೆಸಬೇಕಾದ ಅವಶ್ಯಕತೆಯಿದೆ. ಇಲ್ಲದಿದ್ದರೆ ಇಂತಹ ಹಗರಣಗಳು ಎಗ್ಗಿಲ್ಲದೆ ನಡೆಯುತ್ತಲೇ ಇರುತ್ತವೆ.

ಪುಟ್ಟೇಗೌಡ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು