ಮಂಗಳವಾರ, ಸೆಪ್ಟೆಂಬರ್ 29, 2020
22 °C

ವಾಚಕರ ವಾಣಿ | ರಾಮಾಯಣ ಕಾವ್ಯ: ಸುಲಭ ಬೆಲೆಗೆ ದೊರಕಿಸಿಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ. ಮಂದಿರ ನಿರ್ಮಾಣದ ಜತೆಜತೆಗೇ ಈ ಸವಿನೆನಪಿನ ಜಂಗಮ ಸ್ವರೂಪಿಗಳಾದ ವಾಲ್ಮೀಕಿ ರಾಮಾಯಣ ಮೊದಲುಗೊಂಡು ತುಳಸಿ ರಾಮಾಯಣ, ಕಂಬ ರಾಮಾಯಣ, ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮುಂತಾಗಿ ದೇಶದ ನೂರಾರು ರಾಮಾಯಣ ಕಾವ್ಯಗಳನ್ನು ಸಂಪಾದಿಸಿ ಹಾಗೂ ವಿವಿಧ ದೇಶಭಾಷೆಗಳಿಗೆ ತರ್ಜುಮೆ ಮಾಡಿ ಸುಲಭ ಬೆಲೆಗೆ ಸಿಗುವಂತೆ ಪ್ರಕಟಿಸಬೇಕು.

ಇದಕ್ಕಾಗಿ ರಾಮಜನ್ಮಭೂಮಿ ಟ್ರಸ್ಟ್‌ ಅಧೀನದಲ್ಲಿ ಒಂದು ಪೀಠವನ್ನು ಸ್ಥಾಪಿಸಬಹುದು. ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಟ್ರಸ್ಟ್‌ ಕಾರ್ಯಪ್ರವೃತ್ತವಾಗಬೇಕು.

-ಪ್ರೊ. ಶಿವರಾಮಯ್ಯ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು