ಮಂಗಳವಾರ, ಸೆಪ್ಟೆಂಬರ್ 21, 2021
25 °C

ಎಂತಹ ದೌರ್ಭಾಗ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಧಾನಸಭೆಯ ಕಲಾಪದ ನೇರ ಪ್ರಸಾರ ಮಾಡದಂತೆ ವಿಧಾನಸಭೆ ಸಚಿವಾಲಯವು ಟಿ.ವಿ. ಸುದ್ದಿವಾಹಿನಿಗಳಿಗೆ ನಿರ್ಬಂಧ ವಿಧಿಸಿದೆ (ಪ್ರ.ವಾ., ಅ. 10). ಕರುನಾಡಿನ ಮತದಾರನದು ಎಂತಹ ದೌರ್ಭಾಗ್ಯ! ಅಧಿವೇಶನ ನಡೆಯುತ್ತಿದ್ದಾಗ ನಾಯಕರೊಬ್ಬರು ತೋಳು ತಟ್ಟಿ ಪಂಥಾಹ್ವಾನ ನೀಡಿದ್ದನ್ನು, ಪಕ್ಷೇತರರೊಬ್ಬರು ಅಂಗಿ ಹರಿದುಕೊಂಡಿದ್ದನ್ನು, ಒಂದಿಬ್ಬರು ನೀಲಿಚಿತ್ರ ವೀಕ್ಷಿಸುತ್ತಿದ್ದುದನ್ನು, ಸಚಿವರೊಬ್ಬರು ‘ಕಾವೇರಿ’ದ ಚರ್ಚೆ ನಡೆಯುವಾಗ ರಂಗೋಲಿ ಬಿಡಿಸುತ್ತಿದ್ದುದನ್ನು ನೋಡಿ ಪುನೀತರಾಗಿದ್ದೆವು. ಈಗ ನಿರ್ಬಂಧ ವಿಧಿಸಿರುವುದರಿಂದ ಇಂತಹ ವಿಶೇಷ ಪ್ರಹಸನಗಳನ್ನು ನೋಡುವುದರಿಂದ ನಾವು ವಂಚಿತರಾಗಿದ್ದೇವೆ.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು