ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ ಅವಧಿ ರದ್ದು ತರವಲ್ಲ

Last Updated 3 ಸೆಪ್ಟೆಂಬರ್ 2020, 20:00 IST
ಅಕ್ಷರ ಗಾತ್ರ

ಪ್ರಶ್ನೆಗಳು ಮನುಷ್ಯರನ್ನು ಜಾಗೃತರನ್ನಾಗಿ ಮಾಡಿ, ಸರಿಯಾದ ದಾರಿಯತ್ತ ಕರೆದೊಯ್ಯುತ್ತವೆ. ಹಾಗೆಯೇ ಸಂಸತ್ತಿನಲ್ಲಿ ಜನಪ್ರತಿನಿಧಿಗಳು ಸರ್ಕಾರವನ್ನು ಕೇಳುವ ಪ್ರಶ್ನೆಗಳು, ದೇಶದ ವಾಸ್ತವದ ಸ್ಥಿತಿಗತಿಯ ಚಿತ್ರಣವನ್ನು ಅನಾವರಣಗೊಳಿಸುತ್ತವೆ. ಈ ಮೂಲಕ ಅನೇಕ ಅವ್ಯವಸ್ಥೆಗಳಿಗೆ ಮದ್ದು ಹುಡುಕಲು ನೆರವಾಗುತ್ತವೆ.

ಆದರೆ, ಇದೇ 14ರಿಂದ ಆರಂಭಗೊಳ್ಳಲಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಪ್ರಶ್ನೋತ್ತರ ಅವಧಿಯನ್ನು ರದ್ದು ಮಾಡಲು ನಿರ್ಧರಿಸಿರುವುದು ದುರದೃಷ್ಟಕರ. ಕೊರೊನಾದಿಂದಾಗಿ ಜನ ಈಗಾಗಲೇ ಹಸಿವು, ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟದಂತಹ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಹೀಗಿರುವಾಗ ತಮ್ಮ ಜನಪ್ರತಿನಿಧಿಗಳ ಮೂಲಕ ಇಂತಹ ಸಮಸ್ಯೆಗಳಿಗೆ ಸರ್ಕಾರದಿಂದ ಪರಿಹಾರ ಅಥವಾ ಭರವಸೆ ಪಡೆದುಕೊಳ್ಳುವ ಅವರ ಅಭಿಲಾಷೆಗೆ ಇದರಿಂದ ಹಿನ್ನಡೆಯಾಗುತ್ತದೆ. ಹೀಗಾಗಿ ಇದು ಜನರ ಗಾಯದ ಮೇಲೆ ಬರೆ ಎಳೆಯುವಂತಹ ನಿರ್ಧಾರವೇ ಆಗಿದೆ.

ನಾಗೇಶ ಹರಳಯ್ಯ, ಕಲುಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT