ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ರೈಲ್ವೆ ಇಲಾಖೆಯಿಂದ ದುಬಾರಿ ದರ

Last Updated 22 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಸಂಬಂಧಿಕರನ್ನು ರೈಲಿಗೆ ಹತ್ತಿಸಲು ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ತೆರಳಿ ಪ್ಲ್ಯಾಟ್‌ಫಾರ್ಮ್‌ ಟಿಕೆಟ್‌ ಖರೀದಿಸಿದೆ. ಸಾಮಾನ್ಯವಾಗಿ ₹ 5 ಅಥವಾ ₹ 10 ಇರುತ್ತಿದ್ದ ಟಿಕೆಟ್ ಬೆಲೆ ₹ 50 ಆಗಿದ್ದು ನೋಡಿ, ನಿಜಕ್ಕೂ ಭಾರತ ಯಾವ ದಿಕ್ಕಿಗೆ ಸಾಗುತ್ತಿದೆ ಎನಿಸಿ ನೋವಾಯಿತು. ಮಹಿಳೆಯರು, ಮಕ್ಕಳು ಅಥವಾ ವೃದ್ಧರು ಪ್ರಯಾಣಿಸುವಾಗ ಅವರನ್ನು ಸುರಕ್ಷಿತವಾಗಿ ರೈಲು ಹತ್ತಿಸಲು ಅವರ ಕಡೆಯವರು ನಿಲ್ದಾಣಕ್ಕೆ ತೆರಳುವುದು ಸಾಮಾನ್ಯ. ಆದರೆ ಅದಕ್ಕಾಗಿ ರೈಲ್ವೆ ಇಲಾಖೆಯು ಪ್ಲ್ಯಾಟ್‌ಫಾರ್ಮ್‌ ಪ್ರವೇಶ ದರವನ್ನುತಲಾ ₹ 50 ವಿಧಿಸುವುದು ಅತ್ಯಂತ ದುಬಾರಿ. ಹಿಂದಿನಂತೆ ದರ ನಿಗದಿ ಮಾಡಬೇಕು. ಇಲ್ಲದಿದ್ದರೆ ತಮ್ಮ ಕುಟುಂಬಸ್ಥರನ್ನು ಸುರಕ್ಷಿತವಾಗಿ ರೈಲು ಹತ್ತಿಸಲು ಸಾಧ್ಯವಾಗದೆ ಜನ ತೊಂದರೆಗೆ ಸಿಲುಕುವ ಸಾಧ್ಯತೆ ಇರುತ್ತದೆ.

–ಇಫಾ೯ನ್ ಇಟಗಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT