ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ ವಾತಾವರಣ ದುರ್ಬಲಗೊಳಿಸದಿರಿ

Last Updated 18 ಜನವರಿ 2022, 15:16 IST
ಅಕ್ಷರ ಗಾತ್ರ

ಬೋಧನೆಯಲ್ಲಿ ಅತಿಥಿ ಉಪನ್ಯಾಸಕರ ಬೋಧನೆ ಹಾಗೂ ಕಾಯಂ ಉಪನ್ಯಾಸಕರ ಬೋಧನೆ ಎಂದು ಬೇರೆ ಬೇರೆಯಾಗಿ ಇರುತ್ತದೆಯೇ? ಅರ್ಹತೆ ಎಂದರೆ ಏನು? ಕಡಿಮೆ ವೇತನ ಕೊಟ್ಟು ಉಪನ್ಯಾಸಕರ ಕೊರತೆಯನ್ನು ನೀಗಿಸುವುದೇ? ಇಂತಹ ಸ್ಥಿತಿಯಲ್ಲಿ ಉಪನ್ಯಾಸಕರು ಮನಃಪೂರ್ವಕವಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆಯೇ ಎಂದು ಪೋಷಕರಿಗೆ ಆತಂಕವಾಗುವುದಿಲ್ಲವೇ?

ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಲು ಸಾಧ್ಯವಿಲ್ಲ ಎಂದಾದರೆ, ಮುಂದೆ ಬರಬಹುದಾದ ಸಮಸ್ಯೆಗಳ ಪೂರ್ವಾಲೋಚನೆ ಇಲ್ಲದೆ ನೇಮಕ ಮಾಡಿಕೊಳ್ಳುವುದಾದರೂ ಏಕೆ? ಉತ್ತಮ ಬೋಧನೆಗೆ ಪೂರಕವಾಗಿ ಸರ್ಕಾರದ ಬೆಂಬಲವಿಲ್ಲದೇ ಇದ್ದರೆ ಉತ್ತಮ ಶೈಕ್ಷಣಿಕ ವಾತಾವರಣ ಸಾಧ್ಯವಿಲ್ಲ. ವೇತನವನ್ನೇ ಮುಂದಿಟ್ಟುಕೊಂಡು ಶೈಕ್ಷಣಿಕ ವಾತಾವರಣವನ್ನು ದುರ್ಬಲಗೊಳಿಸುವುದು ಬೇಡ. ಉಪನ್ಯಾಸಕರ ಕೊರತೆ ಇರುವುದನ್ನು ಗಮನದಲ್ಲಿಟ್ಟುಕೊಂಡು ಈಗ ಸೇವೆಯಲ್ಲಿರುವ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಿ ಅವರಿಗೆ ಸೂಕ್ತ ಮೌಲ್ಯಮಾಪನ, ತರಬೇತಿಯಂಥ ವಿಚಾರಗಳ ಬಗ್ಗೆ ಸರ್ಕಾರ ಚಿಂತನೆ ಮಾಡುವುದು ಸೂಕ್ತ.

ಡಾ. ಮಹಾಲಕ್ಷ್ಮಿ ವಿ.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT