ಅನುಚಿತ ಭಾಷೆ ತರವಲ್ಲ

ಸೋಮವಾರ, ಮೇ 27, 2019
27 °C

ಅನುಚಿತ ಭಾಷೆ ತರವಲ್ಲ

Published:
Updated:

ಚುನಾವಣಾ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿವಂಗತ ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ ಬಗ್ಗೆ ಪ್ರಸ್ತಾಪಿಸಿದ್ದು ಅನುಚಿತವಾಗಿದೆ. ‘ಮರಣಾಂತಾನಿ ವೈರಾಣಿ’- ಇದು ಈ ದೇಶದ ಆರ್ಷ ಧರ್ಮ ಹೇಳುವ ವಿವೇಕ. ಪ್ರಧಾನಿ ಮಾತಿನಿಂದ ಕ್ರೋಧಗೊಂಡಿರುವ ಕಾಂಗ್ರೆಸ್ ಪಕ್ಷ, ತಾನೇನೂ ಸಾಚಾ ಅಥವಾ ಸಭ್ಯ ಎಂದುಕೊಳ್ಳುವ ಅಗತ್ಯವಿಲ್ಲ. ಆ ಪಕ್ಷದ ಪ್ರಮುಖ ನಾಯಕರಿಂದ ಮೊದಲ್ಗೊಂಡು ಕೆಳಹಂತದ ನಾಯಕರವರೆಗೂ ಪ್ರಧಾನಿಯನ್ನು ಹೀಯಾಳಿಸುತ್ತಿರುವ ಬಗೆಯನ್ನು ನಾವು ಗಮನಿಸಬೇಕು.

ರಾಹುಲ್‌ ಗಾಂಧಿ ಅವರು ಚುನಾವಣಾ ವೇದಿಕೆಗಳಲ್ಲಿ ಪದೇ ಪದೇ ತಮ್ಮನ್ನು ನಿಂದಿಸಿದ್ದರಿಂದ ಮೋದಿ ಕ್ರುದ್ಧರಾದರೆಂದು ತೋರುತ್ತದೆ. ಆದಾಗ್ಯೂ ಅವರು ದಿವಂಗತ ವ್ಯಕ್ತಿಯ ಬಗ್ಗೆ ಪ್ರಸ್ತಾಪ ಮಾಡದಿದ್ದರೆ ಒಳಿತಿತ್ತು. ಈ ದೇಶದ ಪ್ರಧಾನಿ ಆಗುವ ಕನಸು ಹೊಂದಿರುವ ರಾಹುಲ್ ಕೂಡ ಆ ಹುದ್ದೆಗೆ ಅಗತ್ಯವಾದ ಗಾಂಭೀರ್ಯ, ಪ್ರೌಢಿಮೆ ತಮಗಿವೆ ಎನ್ನುವುದನ್ನು ಸಾಬೀತು ಮಾಡಿಲ್ಲ. ಒಬ್ಬ ಪ್ರಧಾನಿಯ ಬಗ್ಗೆ ಅವರು ಬಳಸುವ ಭಾಷೆ ಸಹ ಸರಿಯಿಲ್ಲ.
-ಸಾಮಗ ದತ್ತಾತ್ರಿ, ಬೆಂಗಳೂರು

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !