ಬುಧವಾರ, ಜನವರಿ 22, 2020
20 °C

ಪಕ್ಷಿಗಳ ನಿರ್ಗಮನ ಹೇಳುವುದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳಿಗಾಲದಲ್ಲಿ ಬರುವ ವಲಸೆ ಹಕ್ಕಿಗಳನ್ನು ನೋಡಲು ಪಕ್ಷಿಪ್ರಿಯರು‌ ಪಕ್ಷಿಧಾಮ, ಕೆರೆ-ಕುಂಟೆಯಂತಹ ನೀರಿನ ಆವಾಸಗಳೆಡೆಗೆ ಧಾವಿಸುತ್ತಾರೆ. ಆದರೆ ಈ‌‌ ಬಾರಿ ವಲಸೆ ಹಕ್ಕಿಗಳ ನೆಚ್ಚಿನ ತಾಣಗಳಲ್ಲಿ ಪಕ್ಷಿಗಳ ಕಲರವ ಹೆಚ್ಚಾಗಿ ಕೇಳಿಬರುತ್ತಿಲ್ಲ. ಈ ವರ್ಷ ಉತ್ತಮ ಮಳೆಯಾಗಿ ನೀರಿನ ಆಕರಗಳು ಸಮೃದ್ಧಗೊಂಡಿದ್ದರೂ ಎಷ್ಟೋ ಕೆರೆಗಳಿಗೆ ಪಕ್ಷಿಗಳು ಧಿಕ್ಕಾರ ಹಾಕಿವೆ. ಇದೊಂದು ಆತಂಕಕಾರಿ ವಿದ್ಯಮಾನ.

ಪಕ್ಷಿಗಳು ಪರಿಸರ ಸಮತೋಲನದ ಮಾನದಂಡಗಳು. ಕೆರೆಗಳ‌ ನೀರು ವಿವಿಧ ಕಾರಣಗಳಿಂದ ಮಲಿನ
ಗೊಂಡಿರುತ್ತದೆ. ಕೆರೆಗಳು ಇರುವ ಸ್ಥಳಗಳಲ್ಲಿ ಗಿಡಮರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುತ್ತದೆ. ಒತ್ತುವರಿ, ಶಬ್ದಮಾಲಿನ್ಯ, ಪ್ರವಾಸಿಗರ ಗದ್ದಲ... ಮೊದಲಾದ ಕಾರಣಗಳಿಂದ ಪಕ್ಷಿಗಳು ದೂರ ಹೋಗಿವೆ. ‘ಪಕ್ಷಿಗಳ ಆವಾಸಸ್ಥಾನವನ್ನು‌‌ ಕಸಿದುಕೊಂಡರೆ ಅವು ಏನನ್ನೂ ಹೇಳದೆ ಅಲ್ಲಿಂದ ನಿರ್ಗಮಿಸುತ್ತವೆ. ಆದರೆ ಅವುಗಳ ನಿರ್ಗಮನ ನಮ್ಮ ನಿರ್ಗಮನದ ಮುನ್ನುಡಿಯಷ್ಟೇ’ ಎಂಬ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಮಾತು‌ ನೆನಪಾಗುತ್ತಿದೆ.

ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ

ಪ್ರತಿಕ್ರಿಯಿಸಿ (+)