ಸೋಮವಾರ, ಏಪ್ರಿಲ್ 6, 2020
19 °C

ಟ್ರಂಪ್‌ಗೆ ಕಾಣದಿರಬಹುದು, ಆದರೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕದ ಅಧ್ಯಕ್ಷರ ಭಾರತ ಭೇಟಿ ಮತ್ತು ಅದರಿಂದ ಆಗುವ ಅನುಕೂಲವನ್ನು ತಾವು ದೊಡ್ಡಮ್ಮನ ಮನೆಗೆ ಭೇಟಿ ನೀಡಿದ್ದ ಸಂದರ್ಭಕ್ಕೆ ಹೋಲಿಕೆ ಮಾಡಿ ಸರಿಯಾದ ವಿವರಣೆಯನ್ನು ನೀಡಿದ್ದಾರೆ ಗೋಪಾಲ ನಾಯ್ಕ ಜಿ.ಎಸ್‌. (ಪ್ರ.ವಾ., ಮಾರ್ಚ್‌ 3). ಮೇಲೆ ಬಣ್ಣ ಒಳಗೆ ಸುಣ್ಣ ಎಂಬ ಗಾದೆ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ.

ಯಾರನ್ನೋ ಮೆಚ್ಚಿಸಲು ಕೊಳೆಗೇರಿ ಕಾಣದಂತೆ ಗೋಡೆ ನಿರ್ಮಾಣ ಮಾಡಿಸುವ ಬದಲು, ಅದೇ ದುಡ್ಡನ್ನು ಆ ಕೊಳೆಗೇರಿಯ ಅಭಿವೃದ್ಧಿ ಕೆಲಸಕ್ಕೆ ಬಳಸಿದ್ದರೆ ಅದು ಮಾದರಿಯ ನಡೆಯಾಗುತ್ತಿತ್ತು. ಟ್ರಂಪ್ ಅವರಿಗೆ ಈ ಕೆಲಸ ಕಾಣದೇ ಇರಬಹುದು, ಆದರೆ ದೇಶದ ಜನರಿಗೆ ಕಾಣದೇ ಇರುತ್ತದೆಯೇ?
-ಪ್ರವೀಣ್ ಎಚ್.ಕೆ., ಎಚ್‌.ಡಿ.ಕೋಟೆ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)