ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ–ಕಾಲೇಜು ಪುನರಾರಂಭ: ಪುನರ್‌ಪರಿಶೀಲಿಸಿ

Last Updated 9 ಜೂನ್ 2020, 19:29 IST
ಅಕ್ಷರ ಗಾತ್ರ

ಶಾಲಾ– ಕಾಲೇಜುಗಳು ಆಗಸ್ಟ್ 15ರ ನಂತರವಷ್ಟೇ ಪುನರಾರಂಭವಾಗಲಿವೆ ಎಂದು ಕೇಂದ್ರ ಸರ್ಕಾರ ಹೇಳಿರುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಿಯಾದ ಕ್ರಮ. ಆದರೆ ಒಂದು ಅಂಶವನ್ನು ಗಮನಿಸಬೇಕು.

ಎಸ್ಎಸ್ಎಲ್‌ಸಿ, ಪಿಯುಸಿ, ಪದವಿ ಕೋರ್ಸ್‌ಗಳಲ್ಲಿ ಗಳಿಸುವ ಅಂಕಗಳು ಮುಂದಿನ ಹಂತದ ತರಗತಿಗಳ ಪ್ರವೇಶಕ್ಕೆ ಹಾಗೂ ಕೆಲವು ಉದ್ಯೋಗಗಳನ್ನು ಪಡೆಯುವುದಕ್ಕೆ ಪ್ರಮುಖ ಮಾನದಂಡಗಳಲ್ಲಿ ಒಂದಾಗಿರುತ್ತವೆ.

ಈ ತರಗತಿಗಳನ್ನು ವಿಳಂಬವಾಗಿ ಪ್ರಾರಂಭಿಸುವುದರಿಂದ ಪಠ್ಯಕ್ರಮ ಮುಗಿಸಲು ಅವಧಿ ಸಾಲದಾಗುತ್ತದೆ ಅಥವಾ ಶೈಕ್ಷಣಿಕ ವರ್ಷವು ಅಸಮತೋಲನಕ್ಕೆ ಒಳಗಾಗಿ, ಶೈಕ್ಷಣಿಕ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಒಂದರಿಂದ ಒಂಬತ್ತನೇ ತರಗತಿಗಳು ವಿಳಂಬವಾಗಿ ಪ್ರಾರಂಭವಾದರೂ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದು.

ಎಸ್ಎಸ್ಎಲ್‌ಸಿ ಮತ್ತು ನಂತರದ ಹಂತದಲ್ಲಿ ವಿದ್ಯಾರ್ಥಿಗಳು ಪ್ರೌಢಾವಸ್ಥೆಗೆ ಬಂದಿರುವುದರಿಂದ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ಜೊತೆಗೆ, ಆಗಸ್ಟ್‌ವರೆಗೆ ಶಾಲಾ– ಕಾಲೇಜುಗಳನ್ನು ಮುಚ್ಚುವುದರಿಂದ ಅದನ್ನೇ ನಂಬಿಕೊಂಡಿರುವ ಅನುದಾನರಹಿತ ಶಿಕ್ಷಕರು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಯು ಸಂಬಳವಿಲ್ಲದೆ ತೊಂದರೆಗೆ ಒಳಗಾಗುತ್ತಾರೆ. ಆದ್ದರಿಂದ ಎಸ್ಎಸ್ಎಲ್‌ಸಿ ಮತ್ತು ನಂತರದ ತರಗತಿಗಳನ್ನು ಪ್ರಾರಂಭಿಸುವ ದಿಸೆಯಲ್ಲಿ ಸರ್ಕಾರ ಯೋಚಿಸಬೇಕು.

-ಅಶೋಕ ಓಜಿನಹಳ್ಳಿ,ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT