ಸೋಮವಾರ, ಆಗಸ್ಟ್ 2, 2021
20 °C

ಸಮುದಾಯದ ಹಿತಕ್ಕೆ ನಿಷ್ಠರಾಗಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸ್ವಂತ ವರದಿ ಅಲ್ಲಗಳೆದ ಐಸಿಎಂಆರ್’ ಸುದ್ದಿ (ಪ್ರ.ವಾ., ಜೂನ್‌ ///) ಓದಿ ಆಶ್ಚರ್ಯವೇನೂ ಆಗಲಿಲ್ಲ. ಕೇಂದ್ರ ಆರೋಗ್ಯ ಇಲಾಖೆ ನಡೆಸುವ ಸುದ್ದಿಗೋಷ್ಠಿಯಲ್ಲಿ, ಅದರ ಪ್ರತಿನಿಧಿ ಮಾತನಾಡುವ ಬಗೆ ಬದಲಾಗಿದೆ. ವಿಜ್ಞಾನಿಗಳು ಇದ್ದುದನ್ನು ಹೇಳುತ್ತಾರೆ (ಉದಾಹರಣೆಗೆ, ಡಾ. ರಮಣ್ ಗಂಗಾ ಖೇಡ್ಕರ್ ಖಂಡತುಂಡವಾಗಿ ಉತ್ತರಿಸುತ್ತಿದ್ದರು, ಈಚೆಗೆ ಅವರು ಬರುತ್ತಿಲ್ಲ). ಐಸಿಎಂಆರ್‌ ಮುಖ್ಯಸ್ಥರು ಸರ್ಕಾರದ ನಿಲುವು, ನಿರ್ಧಾರಗಳಿಗೆ ಅನುಗುಣವಾಗಿ ಇರುವ ಎಚ್ಚರ ವಹಿಸುತ್ತಾರೆ. ನೀತಿ ಆಯೋಗದ ಗಮನವೂ ಅದರತ್ತಲೇ ಹೆಚ್ಚು.

ರ‍್ಯಾಪಿಡ್‌ ಟೆಸ್ಟ್, ಯಾರನ್ನೆಲ್ಲ ಪರೀಕ್ಷಿಸಬೇಕು, ಎಚ್‌ಸಿಕ್ಯೂ ಅಂತಹ ವಿಷಯಗಳಲ್ಲಿ ಐಸಿಎಂಆರ್ ಅನಿಶ್ಚಿತತೆ, ವಿಳಂಬ ಧೋರಣೆಯಿಂದ ವರ್ತಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ನಡೆಯ ಬಗೆಗೆ ಪ್ರಶ್ನೆಗಳೆದ್ದಿವೆ, ಹಾಗೆಯೇ ಇಲ್ಲೂ. ವೈದ್ಯಕೀಯ ದೃಷ್ಟಿಯಿಂದ ಸರ್ಕಾರಕ್ಕೆ ಏನು ಹೇಳಬೇಕೋ ಆ ವಿಷಯದಲ್ಲಿ ಹಿಂಜರಿಕೆ, ಅಧೈರ್ಯ ಇರಬಾರದು. ವೈದ್ಯರು, ವಿಜ್ಞಾನಿಗಳು ಮೊದಲು ಸಮುದಾಯದ ಹಿತಕ್ಕೆ ನಿಷ್ಠರಾಗಿರಬೇಕು, ಸರ್ಕಾರಿ ಸಂಸ್ಥೆಗಳಲ್ಲಿ ಇರುವವರೂ ಹೀಗೆಯೇ ನಡೆದುಕೊಂಡರೆ ತೀರ್ಮಾನಗಳ ಗುಣಮಟ್ಟ ಹೆಚ್ಚುತ್ತದೆ.

ಎಚ್.ಎಸ್.ಮಂಜುನಾಥ, ಗೌರಿಬಿದನೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.