ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜೆಯೂ ಬೇಡ, ವೈಭವೀಕರಣವೂ ಬೇಡ

ಅಕ್ಷರ ಗಾತ್ರ

ಇಂದು (ಡಿ. 10) ವಿಶ್ವ ಮಾನವ ಹಕ್ಕುಗಳ ದಿನ. ‘ನಾವೆಲ್ಲರೂ ಮನುಜರು, ಯಾರು ಯಾರನ್ನೂ ಶೋಷಿಸಬಾರದು, ಎಲ್ಲರೂ ಘನತೆಯಿಂದ, ಗೌರವದಿಂದ, ಯಾವ ತಾರತಮ್ಯವೂ ಇರದೆ, ಜಾತಿ, ಧರ್ಮ, ಮತ, ಲಿಂಗದ ಅಂತರವಿರದೆ ಬದುಕಲು ಅರಿಯಬೇಕು, ಬದುಕಲು ಬಿಡಬೇಕು’ ಎಂಬ ಆಶಯ ವಿಶ್ವ ಮಾನವ ಹಕ್ಕುಗಳ ಘೋಷಣೆಯ ಹಿಂದಿದೆ.

ವಿಶ್ವಸಂಸ್ಥೆಯ ನೇತೃತ್ವದಲ್ಲಿ 1995ರಲ್ಲಿ ಬೀಜಿಂಗ್‌ನಲ್ಲಿ ನಡೆದ ನಾಲ್ಕನೆಯ ವಿಶ್ವ ಮಹಿಳಾ ಸಮ್ಮೇಳನದ ಸಂದರ್ಭದಲ್ಲಿ ಹಿಲರಿ ಕ್ಲಿಂಟನ್‌, ‘ಮಹಿಳಾ ಹಕ್ಕುಗಳು ಮಾನವ ಹಕ್ಕುಗಳು’ ಎಂದು ಘೋಷಿಸಿದರು. ಈ ಘೋಷಣೆಯ ಕೂಗು ಮೊಳಗಿ ದಶಕಗಳೇ ಕಳೆದಿವೆ. ಅದೇ ಸಮಯದಲ್ಲಿ ಮಹಿಳೆಯರ ಬದುಕಿನಲ್ಲಿ ಅನೇಕ ಬದಲಾವಣೆಗಳು ಕಂಡುಬಂದಿವೆ. ಸಾಮಾಜಿಕ, ಆರ್ಥಿಕ, ರಾಜಕೀಯ ನೆಲೆಗಳಲ್ಲಿ ಕಣ್ಣಿಗೆ ಕಾಣುವಷ್ಟು ನಿಚ್ಚಳವಾಗಿ ಬದುಕು ಬದಲಾಗಿದ್ದರೆ, ವೈಯಕ್ತಿಕ ನೆಲೆಯಲ್ಲಿ ಇನ್ನೂ ತೊಡಕುಗಳು ಬೆಳೆಯುತ್ತಲೇ ಇವೆ. ಅವಳ ನಡೆ ನುಡಿ, ಉಡುವ ತೊಡುವ ವಿಷಯ, ಮದುವೆಯಂತಹ ವೈಯಕ್ತಿಕ ವಿಚಾರ ಇಂದಿಗೂ ಚರ್ಚೆಗೆ ಗ್ರಾಸವಾಗಿರುವುದು ದುರಂತವೇ ಸರಿ.

ಊಳಿಗಮಾನ್ಯ ಮನಃಸ್ಥಿತಿ ಬದಲಾಗದೆ, ಮಹಿಳೆಯರು ಸಮಾನ ಸ್ಥಾನ ಪಡೆಯಲು ಸಾಧ್ಯವಿಲ್ಲ. ಮಹಿಳೆಯನ್ನು ದೇವತೆಯೆಂದು ಪೂಜಿಸುವುದೂ ಬೇಡ, ವೈಭವೀಕರಿಸುವುದೂ ಬೇಡ, ಹಾಗೆಯೇ ತುಚ್ಛೀಕರಿಸುವುದೂ ಬೇಡ. ಅವಳನ್ನು ಮನುಷ್ಯಳಂತೆ ಕಂಡರೆ ಸಾಕು. ಆಗ ಮಹಿಳಾ ಹಕ್ಕುಗಳು ಅರ್ಥಾತ್‌ ಮಾನವ ಹಕ್ಕುಗಳು ಅರ್ಥ ಪಡೆಯುತ್ತವೆ.

- ಡಾ. ಗಿರಿಜಾ ಕೆ.ಎಸ್., ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT