ಭಾನುವಾರ, ನವೆಂಬರ್ 28, 2021
21 °C

ಕನಿಷ್ಠ ವೇತನವಾದರೂ ಬೇಡವೇ?

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ‘ಎ’ ಮತ್ತು ‘ಬಿ’ ದರ್ಜೆಯ ದೇವಾಲಯಗಳ ಅರ್ಚಕರ ವೇತನ ಹೆಚ್ಚಳ ಮಾಡಲಾಗಿದೆ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.‌ ಆದರೆ ಅವರು ‘ಸಿ’ ವರ್ಗದ ದೇವಾಲಯಗಳಲ್ಲಿ‌ ಕೆಲಸ ಮಾಡುತ್ತಿರುವ ಅರ್ಚಕರ ಸ್ಥಿತಿಯನ್ನು ಗಮನಕ್ಕೇ ತೆಗೆದುಕೊಂಡಿಲ್ಲ. ಅವರಲ್ಲಿ ಬಹುತೇಕ ದೇವಾಲಯಗಳ‌ ಅರ್ಚಕರ ವೇತನ ₹ 2, ₹ 3 ಇದೆ. ಇದು ನಾಚಿಕೆಗೇಡಿನ ಸಂಗತಿ. ‌ನಾವು ಆಸ್ತಿಕರೋ ನಾಸ್ತಿಕರೋ ಬೇರೆ ಪ್ರಶ್ನೆ. ಆದರೆ ಈ ದೇವಾಲಯಗಳು‌ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಅಲ್ಲಿ‌ ಕೆಲಸ ಮಾಡುವವರಿಗೆ ಮರ್ಯಾದೆ ತರುವ ಒಂದು ಕನಿಷ್ಠ ವೇತನವಾದರೂ ಬೇಡವೇ?

- ಕೆ.ವೆಂಕಟರಾಜು, ಚಾಮರಾಜನಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು