ಅಮೆರಿಕದಲ್ಲಿ ಸದ್ಯದಲ್ಲೇ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಕಾವು ರಂಗೇರುತ್ತಿದೆ. ಜಗತ್ತಿಗೆ ಅಣ್ಣನೆನಿಸಿಕೊಂಡಿರುವ ಅಮೆರಿಕದ ಚುನಾವಣೆಯನ್ನು ಜಗತ್ತಿನ ದೇಶಗಳು ಗಂಭೀರವಾಗಿ ತೆಗೆದುಕೊಳ್ಳುತ್ತವೆ. ಅಲ್ಲಿ ನೆಲೆಸಿರುವ ಭಾರತೀಯ ಮೂಲದ ಅಮೆರಿಕನ್ನರು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರಧಾರಿಗಳು. ಹಾಗಾಗಿ ಚುನಾವಣಾ ಅಭ್ಯರ್ಥಿಗಳು ಭಾರತೀಯ ಮೂಲದವರನ್ನು ಸೆಳೆಯಲು ಶತಾಯಗತಾಯ ಪ್ರಯತ್ನಿಸುತ್ತಾರೆ.

ಅಮೆರಿಕವು ಈಗ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಅಲ್ಲದೆ ಭಾರತ ಇಂದು ಅತ್ಯಂತ ಕ್ಲಿಷ್ಟ ರಾಜತಾಂತ್ರಿಕ ಪರಿಸ್ಥಿತಿಯಲ್ಲಿದ್ದು, ಅಮೆರಿಕವು ಭಾರತದ ಸಹಾಯಕ್ಕೆ ನಿಲ್ಲುತ್ತಿದೆ. ಜೊತೆಗೆ ಭಾರತವು ಜಗತ್ತಿನ ಎಲ್ಲ ದೇಶಗಳೊಡನೆ ಉತ್ತಮ ಬಾಂಧವ್ಯವನ್ನು ಹೊಂದಿದೆ. ಆದ್ದರಿಂದಲೇ ಚೀನಾ ಕಾಲು ಕೆದರಿ ಜಗಳಕ್ಕೆ ಬಂದಂತೆ ಮಾಡಿ ಹಿಂದೆ ಸರಿಯುತ್ತಿದೆ. ಇಂತಹ ಸ್ಥಿತಿಯಲ್ಲಿ, ಅಮೆರಿಕದೊಡನೆ ಈಗಿರುವ ಉತ್ತಮ ಬಾಂಧವ್ಯವನ್ನು ಮುಂದುವರಿಸಿಕೊಂಡು ಹೋಗುವುದು ಭಾರತಕ್ಕೆ ಅವಶ್ಯ. ಅಮೆರಿಕದಲ್ಲಿ ರಿಪಬ್ಲಿಕನ್ ಅಥವಾ ಡೆಮಾಕ್ರಟಿಕ್ ಪಕ್ಷಗಳಲ್ಲಿ ಯಾವ ಅಭ್ಯರ್ಥಿಯನ್ನು ಆರಿಸಬೇಕು ಎನ್ನುವುದು ಅಮೆರಿಕನ್ನರಿಗೆ ಬಿಟ್ಟ ವಿಷಯ. ಭಾರತ ಮಾತ್ರ ಒಳ್ಳೆಯ ಸಂಬಂಧದೊಂದಿಗೆ ಮುಂದುವರಿಯಬೇಕು.

ಗಂಗಾಧರ ಅಂಕೋಲೆಕರ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.