ಬುಧವಾರ, ಜೂನ್ 23, 2021
23 °C

ವಾಚಕರ ವಾಣಿ: ಪ್ರವಾಹ ನಿಯಂತ್ರಣಕ್ಕೆ ಬೇಕು ಶಾಶ್ವತ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳೆಗಾಲದಲ್ಲಿ ನಿರಂತರವಾಗಿ ಸುರಿಯುವ ಭಾರಿ ಮಳೆಯಂತಹ ನೈಸರ್ಗಿಕ ಸ್ಥಿತಿಗೆ ಮಾನವನಿರ್ಮಿತ ಕೃತ್ಯಗಳೂ ಸೇರಿ ಪ್ರವಾಹಕ್ಕೆ ಕಾರಣವಾಗುತ್ತವೆ. ಬೆಳೆಹಾನಿ, ಸಾವು–ನೋವಿಗೆ ದಾರಿ ತೆಗೆಯುತ್ತವೆ. ಪ್ರವಾಹ ಪರಿಸ್ಥಿತಿಗೆ ನದಿ ತೀರಗಳ ಅತಿಕ್ರಮಣ, ಯೋಜಿತವಲ್ಲದ ರೀತಿಯಲ್ಲಿ ನಗರಗಳ ಬೆಳವಣಿಗೆ, ಬೆಟ್ಟ ಕತ್ತರಿಸುವುದು ಹಾಗೂ ಅರಣ್ಯನಾಶದಂತಹ ಮಾನವಜನ್ಯ ಕಾರಣಗಳ ಕೊಡುಗೆ ಕಡಿಮೆಯೇನಲ್ಲ.

ಪ್ರವಾಹವನ್ನು ಅತ್ಯಂತ ಅಪಾಯಕಾರಿ ನೈಸರ್ಗಿಕ ವಿಪತ್ತುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು ಪ್ರತಿವರ್ಷದ ಕಂಟಕವಾಗಿ ಪರಿಣಮಿಸಿದೆ. ಇದನ್ನು ನಿಭಾಯಿಸಲು ಮತ್ತು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೂರಗಾಮಿ ಮತ್ತು ಶಾಶ್ವತ ಕ್ರಮಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಸಮಗ್ರ ಜಲಾನಯನ ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಿ ಜಾರಿಗೆ ತರಬೇಕು.
-ಪ್ರವೀಣ ನಾಗಪ್ಪ ಯಲವಿಗಿ, ಹಾವೇರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು