ಶುಕ್ರವಾರ, ಜೂನ್ 18, 2021
20 °C

ವಾಚಕರ ವಾಣಿ | ಗ್ರಾಮೀಣ ಬ್ಯಾಂಕ್: ಮಹತ್ವ ಅರಿಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಾಮೀಣ ಬ್ಯಾಂಕುಗಳ ಕುರಿತಾದ ಜಿ.ವಿ.ಜೋಶಿ ಅವರ ಲೇಖನ (ಪ್ರ.ವಾ., ಆ. 6) ನಕಾರಾತ್ಮಕ ಧೋರಣೆಯಿಂದ ಕೂಡಿತ್ತು. ಈ ನಲವತ್ತೈದು ವರ್ಷಗಳಲ್ಲಿ ಗ್ರಾಮೀಣ ಬ್ಯಾಂಕುಗಳು ಮಾಡಿದ ಸಾಧನೆ ಕಡಿಮೆಯೇನಲ್ಲ. ಇದೀಗ ಗ್ರಾಮೀಣ ಬ್ಯಾಂಕುಗಳು ದೇಶದಲ್ಲಿ ಸಾವಿರಾರು ಶಾಖೆಗಳನ್ನು ಹೊಂದಿ, ಕೋಟ್ಯಂತರ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿವೆ. ಕೆಲವು ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಲೂ ಹೆಚ್ಚಿನ ವ್ಯವಹಾರ ನಡೆಸುತ್ತಿವೆ. 

ಈ ಬ್ಯಾಂಕುಗಳ ಠೇವಣಿಗಳಲ್ಲಿ ಬಹುತೇಕ ಭಾಗ ಗ್ರಾಮೀಣ ಜನರಿಂದ ಸಂಗ್ರಹವಾಗಿದ್ದು ವಿಶೇಷವಲ್ಲವೇ? ಕೃಷಿ, ಕೃಷಿಗೆ ಅಗತ್ಯವಾದ ಯಂತ್ರೋಪಕರಣ, ಗ್ರಾಮೀಣ ಗೋದಾಮು, ಸಂಸ್ಕರಣಾ ಘಟಕ ಸೇರಿದಂತೆ ಕೃಷಿಗೆ
ಸಹಕಾರಿಯಾಗುವಂಥ ಮೂಲ ಸೌಕರ್ಯ ಅಭಿವೃದ್ಧಿಗೆ, ಕೃಷಿ ಆಧಾರಿತ ಕೈಗಾರಿಕೆಗಳು, ಸಣ್ಣ ಉದ್ದಿಮೆಗಳಿಗೆ ಇವು ಹಣ ಕೊಟ್ಟಿವೆ. ಇದರಿಂದ ಈ ಬ್ಯಾಂಕುಗಳ ಸ್ಥಾಪನೆಯ ಮೂಲ ಉದ್ದೇಶ ಸಾರ್ಥಕವಾದಂತಲ್ಲವೇ?

ಗ್ರಾಮೀಣ ಅರ್ಥ ವ್ಯವಸ್ಥೆಯ ಅಭಿವೃದ್ಧಿಗೆ ಈ ಬ್ಯಾಂಕುಗಳು ಮಾಡಿದ ಕಾರ್ಯಸಾಧನೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಬರೀ ಲಾಭ–ನಷ್ಟದ ಲೆಕ್ಕಾಚಾರದಿಂದ ಗ್ರಾಮೀಣ ಬ್ಯಾಂಕ್ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಅಳೆಯುವುದು ಸರಿಯಲ್ಲ. ಎಲ್ಲಾ ಗ್ರಾಮೀಣ ಬ್ಯಾಂಕುಗಳನ್ನು ಒಂದುಗೂಡಿಸಿ ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ ಸ್ಥಾಪಿಸಬೇಕಾದ ಅಗತ್ಯವನ್ನು ಮನಗಾಣಬೇಕಾಗಿದೆ.

-ಗಣಪತಿ ಹೆಗಡೆ, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.