ಸೋಮವಾರ, ಆಗಸ್ಟ್ 3, 2020
21 °C

ವಾಚಕರ ವಾಣಿ | ರಾಜಕೀಯ ಅಂಗಳದ ಗಾಳ ಜನಪರವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿವಿಧ ರಾಜಕೀಯ ಸ್ಥಾನಮಾನಗಳಿಗೆ ಯೋಗ್ಯ ವ್ಯಕ್ತಿಗಳನ್ನು ನೇಮಿಸುವ ಮೂಲಕ ಬಿಜೆಪಿಯಲ್ಲಿ ಹೊಸ ಮನ್ವಂತರವೊಂದು ನಿಜವಾಗಲೂ ಆರಂಭವಾಗಿರುವ ಹೊತ್ತಿನಲ್ಲಿಯೇ ಮತ್ತೆ ಕೆಲವು ನಾಮನಿರ್ದೇಶನಗಳು ಪಕ್ಷದ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುವಂತಿವೆ. ಶಾಂತಾರಾಮ ಸಿದ್ದಿ, ಸಾಬಣ್ಣ ತಳವಾರ, ಈರಣ್ಣ ಕಡಾಡಿ, ಅಶೋಕ ಗಸ್ತಿಯಂಥವರ ಆಯ್ಕೆಯು ಪಕ್ಷವು ನಿಜವಾಗಲೂ ರಾಜಕಾರಣವನ್ನು ಹೊಸ ದಿಗಂತದೆಡೆಗೆ ಕೊಂಡೊಯ್ಯುತ್ತಿದೆ ಎನ್ನುವಾಗಲೇ ಎಚ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ್ ಅಂಥವರ ನಾಮನಿರ್ದೇಶನವು ಅಂತಹ ಭರವಸೆಯನ್ನು ಹುಸಿಗೊಳಿಸುತ್ತಿದೆ.

ಸಾಹಿತ್ಯ ಕ್ಷೇತ್ರದ ಕೋಟಾದಡಿ ವಿಶ್ವನಾಥ್ ಅವರ ನೇಮಕ ಅಸಮರ್ಪಕವಾದುದು. ಕನ್ನಡ ಭಾಷೆ ಮತ್ತು ಸಾಹಿತ್ಯ ಸೃಷ್ಟಿಯಲ್ಲಿ ನಿರತರಾಗಿರುವ ನಾಡಿನ ಹಲವು ಬರಹಗಾರರು, ವಿದ್ವಜ್ಜನರು ಯಾವುದೇ ಫಲಾಪೇಕ್ಷೆ ಇಲ್ಲದೆ ಜ್ಞಾನಪ್ರಸಾರದಲ್ಲಿ ನಿರತರಾಗಿದ್ದಾರೆ. ಇಂತಹ ಅಕ್ಷರ ಲೋಕದ ಪ್ರತಿನಿಧಿಯನ್ನು ಪಕ್ಷವು ಆಯ್ಕೆ ಮಾಡಿದ್ದರೆ ಸಹೃದಯರಿಗೊಂದು ಸೂಕ್ತ ಸಂದೇಶವಿರುತ್ತಿತ್ತು. ಆದರೆ ಈಗ ರಾಜಕಾರಣದಲ್ಲಿರುವ ಯಾರಾದರೂ ತನಗನಿಸಿದ್ದನ್ನು ತನ್ನದೇ ಮೂಗಿನ ನೇರಕ್ಕೆ ಏನಾದರೊಂದು ಬರೆದು ಪ್ರಕಟಿಸಿದರೆ, ಮುಂದೊಂದು ದಿನ ಚುನಾವಣೆಯಲ್ಲಿ ಸೋತಾಗ ನಿಗದಿತ ಕೋಟಾದಡಿ ಆಯ್ಕೆಗೆ ಅರ್ಹತೆಯ ಮಾನದಂಡವನ್ನಾಗಿಸುವ ನಡೆಗೆ ಮುನ್ನುಡಿ ಬರೆದಂತಾಗಿದೆ.

-ಎಂ.ಎಸ್.ಸಿದ್ಧಾರ್ಥ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು