ಬುಧವಾರ, ಜನವರಿ 29, 2020
24 °C

ಮತ ಬೇರೆ, ಧರ್ಮ ಬೇರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮತ’ ಎಂಬುದು ಗುಂಪುಕೇಂದ್ರಿತ. ‘ಧರ್ಮ’ ಎನ್ನುವುದು ಮಾನವಕೇಂದ್ರಿತ. ಪ್ರಪಂಚದ ಎಲ್ಲ ಮನುಷ್ಯರಿಗೂ ಅನ್ವಯವಾಗುತ್ತದೆ ಧರ್ಮ. ಮತಗಳು ಸ್ಥಾಪಕರಿಂದ ನಿರ್ಮಿತವಾದವು. ಬಸವಣ್ಣನವರು ‘ಕಳಬೇಡ... ಅನ್ಯರಿಗೆ ಅಸಹ್ಯ ಪಡಬೇಡ’ ಎಂದು, ಧರ್ಮ ಯಾವುದು ಎಂಬುದನ್ನು ಸರಳವಾಗಿ ತಿಳಿಸಿದ್ದಾರೆ. ಧರ್ಮದ ಬಗ್ಗೆ ಅಸಂಖ್ಯಾತ ಗ್ರಂಥಗಳೂ ಇವೆ. ಆದರೆ, ನಮ್ಮಲ್ಲಿ ಇವರೆಡರ ನಡುವಣ ವ್ಯತ್ಯಾಸ ಅರಿಯದೆ, ‘ಧರ್ಮ’ವನ್ನು ‘ಮತ’ದ ಜಾಗಕ್ಕೆ ತಂದು ಕೂರಿಸಿಬಿಟ್ಟಿದ್ದಾರೆ. ‘ಧರ್ಮ’ ಶಬ್ದದ ಮಹತ್ವವನ್ನು ಅರಿತು ಬಳಸಬೇಕಿದೆ.ಮತವು ಧರ್ಮ ಅಲ್ಲ.

ಡಾ. ಎಂ.ರಾಮಕೃಷ್ಣ, ಮೈಸೂರು

ಪ್ರತಿಕ್ರಿಯಿಸಿ (+)