ಉಕ್ರೇನ್ದೇಶದ ನಾಗರಿಕ ವಿಮಾನವನ್ನು ಇರಾನ್ ದೇಶವು ಹೊಡೆದುರುಳಿಸಿರುವುದು ಅಕ್ಷಮ್ಯ ಅಪರಾಧ. ಇರಾನ್ ದೇಶದ ಈ ಕೃತ್ಯವನ್ನು ಇಡೀ ಜಗತ್ತು ಒಕ್ಕೊರಲಿನಿಂದ ಖಂಡಿಸುತ್ತಿರುವಾಗ, ಅದು ತನ್ನ ಈ ಹೀನ ಕೃತ್ಯವನ್ನು ಸಮರ್ಥಿಸಿಕೊಳ್ಳದೇ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿರುವುದು ಮತ್ತು ಮೃತರ ಕುಟುಂಬಗಳಿಗೆ ಪರಿಹಾರ ನೀಡಲು ಮುಂದಾಗಿರುವುದು ಕೊಂಚ ಸಮಾಧಾನ ನೀಡುವಂತಹ ಸಂಗತಿ.

ಸಾಮಾನ್ಯವಾಗಿ ನೇಣಿನ ಕುಣಿಕೆ ಬಿಗಿಯಾಗುತ್ತಿರುವಾಗಲೂ ತಮ್ಮ ತಪ್ಪನ್ನು ಒಪ್ಪಿಕೊಳ್ಳದಿರುವ ಮತ್ತು ತಮ್ಮ ಕೃತ್ಯವನ್ನು ಯಾವುದಾದರೂ ಕೋನದಲ್ಲಿ ಸಮರ್ಥಿಸಿಕೊಳ್ಳುವವರು ಇರುವ ಈ ದಿನಗಳಲ್ಲಿ, ತಪ್ಪನ್ನು ಒಪ್ಪಿಕೊಳ್ಳುವ ಮನಸ್ಸು ಮಾಡಿ ಇರಾನ್ ತನ್ನ ಅಪರಾಧದ ತೂಕವನ್ನು ಕಡಿಮೆ ಮಾಡಿಕೊಂಡಿದೆ.

-ರಮಾನಂದ ಶರ್ಮಾ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.