ಶುಕ್ರವಾರ, ಸೆಪ್ಟೆಂಬರ್ 24, 2021
27 °C

ವಾಚಕರ ವಾಣಿ | ಎಚ್ಚರ... ಉಗ್ರವಾದದ ನಂಜು ಸನಿಹವೇ ಇದೆ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಸರ್ಕಾರವನ್ನು ಕಿತ್ತೊಗೆದು ತಮ್ಮದೇ ಹಿಡಿತ ಸಾಧಿಸಲು ಹೊರಟಿರುವ ಬೆಳವಣಿಗೆ ತೀವ್ರ ಆತಂಕಕಾರಿ. ಇದನ್ನು ವಿಶ್ವದ ಎಲ್ಲ ರಾಷ್ಟ್ರಗಳೂ ಒಕ್ಕೊರಲಿನಿಂದ ಖಂಡಿಸಬೇಕು. ಭಯೋತ್ಪಾದನೆ ಒಂದು ದೇಶಕ್ಕೆ ಸೀಮಿತವಲ್ಲ. ಅದೊಂದು ಜಾಗತಿಕ ಸಮಸ್ಯೆ. ಇಂದು ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಘನಘೋರ ದೃಶ್ಯಗಳನ್ನು ನೋಡುತ್ತಿದ್ದರೆ, ನಾವು ಯಾವ ಯುಗದಲ್ಲಿ ಇದ್ದೇವೆ ಎಂಬ ಭಯ ಉಂಟಾಗುತ್ತದೆ. ಭಯೋತ್ಪಾದನೆಯ ಮೂಲಕ ಕ್ರೂರ ಕೃತ್ಯಗಳಲ್ಲಿ ತೊಡಗುವ ಇಂಥ ಉಗ್ರರಿಗೆ ಸರಿಯಾದ ಪಾಠವನ್ನು ಜಾಗತಿಕ ಸಮೂಹ ಕಲಿಸಬೇಕು. ಇದನ್ನು ಬೇರು ಸಮೇತ ಕಿತ್ತೊಗೆಯಲು ಶ್ರಮಿಸಬೇಕು. ಅಕ್ಕ ಪಕ್ಕದ ರಾಷ್ಟ್ರಗಳು ಒಗ್ಗಟ್ಟಾಗಿ ಆ ದೇಶದಲ್ಲಿರುವ ಉಗ್ರರನ್ನು ಮಟ್ಟ ಹಾಕಬೇಕು.

ಒಂದು ದೇಶದ ಸೈನ್ಯವನ್ನೇ ಸದೆಬಡಿಯುವಷ್ಟು ಮದ್ದು ಗುಂಡು, ಬಂದೂಕುಗಳು, ಯುದ್ಧೋಪಕರಣಗಳು ಉಗ್ರರಲ್ಲಿವೆ ಎಂದರೆ, ಇದರ ಹಿಂದೆ ದೊಡ್ಡ ಆರ್ಥಿಕ ಸಹಾಯ ಅವರಿಗೆ ಇರಲೇಬೇಕು. ಇದೆಲ್ಲವನ್ನೂ ಪತ್ತೆ ಹಚ್ಚಿ, ಅಂಥ ಸಹಾಯ ನೀಡುವ ದೇಶಗಳಿಗೆ ವಿಶ್ವಸಂಸ್ಥೆಯು ದಿಗ್ಬಂಧನ ವಿಧಿಸಲಿ. ಇಲ್ಲವಾದಲ್ಲಿ ಉಗ್ರವಾದದ ನಂಜು ಬೇರೆ ರಾಷ್ಟ್ರಗಳಿಗೂ ಹಬ್ಬುತ್ತದೆ.  

  -   ಪ್ರಾಣೇಶ ಪೂಜಾರ್ ಗಿಣಗೇರಾ, ಕೊಪ್ಪಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು