ಶನಿವಾರ, ಸೆಪ್ಟೆಂಬರ್ 25, 2021
22 °C

ಧರ್ಮ– ರಾಜಕಾರಣದ ಸಂಬಂಧ: ಚರ್ಚೆ ನಡೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಗತೀಕರಣದ ಪ್ರಭಾವವು ಎಲ್ಲ ಕ್ಷೇತ್ರಗಳಲ್ಲೂ ನಿರಂತರವಾಗಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಧರ್ಮವೊಂದೇ ಇವತ್ತಿನ ಮಾರುಕಟ್ಟೆ ನೀತಿಯ ಹೊರಗಿರಬೇಕೆಂದು ನಿರೀಕ್ಷಿಸುವುದು ಸಾಧ್ಯವೇ ಎಂಬ ನಡಹಳ್ಳಿ ವಸಂತ್ ಅವರ ಪ್ರಶ್ನೆ (ಸಂಗತ, ಆ. 4) ಚಿಂತನಾರ್ಹವಾಗಿದೆ. ಅನೇಕ ಧಾರ್ಮಿಕ ಮಠಗಳು ತಮ್ಮ ಐತಿಹಾಸಿಕ ಮಹತ್ವದಿಂದಲೊ, ಮಠಾಧೀಶರ ಪ್ರಭಾವದಿಂದಲೊ ಭಕ್ತರನ್ನು ಆಕರ್ಷಿಸುವ ಕೇಂದ್ರಗಳಾಗಿದ್ದವು.
ಜಾಗತೀಕರಣದ ಪ್ರಭಾವದಿಂದ ಬದಲಾದ ಸನ್ನಿವೇಶದಲ್ಲಿ ಮಠಗಳು, ಧಾರ್ಮಿಕ ಕೇಂದ್ರಗಳು ಭಕ್ತರನ್ನು ಆಕರ್ಷಿಸಲು ತಮ್ಮ ಕಾರ್ಯವೈಖರಿಯನ್ನು ಬದಲಿಸಿಕೊಳ್ಳುವ ಅನಿವಾರ್ಯದಲ್ಲಿವೆ. ಇದಕ್ಕೆಲ್ಲ ಬೇಕಾಗಿರುವ ಸಂಪನ್ಮೂಲಗಳ ಕ್ರೋಡೀಕರಣಕ್ಕೆ ತಮ್ಮ ಜಾತಿಯ ಜನಪ್ರತಿನಿಧಿಗಳನ್ನು ಅವಲಂಬಿಸಿ ಅವರ ಬೆಂಬಲಕ್ಕೆ ನಿಲ್ಲುವ ಅನಿವಾರ್ಯ ಸೃಷ್ಟಿಯಾಗಿದೆ.

ಧರ್ಮವು ರಾಜಕಾರಣದಿಂದ ದೂರವಿರಬೇಕು, ಮಠಾಧೀಶರು ಸಮಾಜದ ಹಿತದೃಷ್ಟಿಯಿಂದ ರಾಜಕಾರಣಿ
ಗಳಿಗೆ ಮಾರ್ಗದರ್ಶನ ಮಾಡುವ ಕಾರ್ಯ ಮಾಡಬೇಕೇ ವಿನಾ ನೇರವಾಗಿ ಅವರ ಬೆಂಬಲಕ್ಕೆ ನಿಲ್ಲುವುದು ಸಾಧುವಲ್ಲ ಮತ್ತು ಅದು ಪ್ರಜಾಪ್ರಭುತ್ವ ವಿರೋಧಿ ಎಂಬುದು ಅನೇಕ ಚಿಂತಕರ ಅಳಲು. ಮಠಗಳು ಮತ್ತು ರಾಜಕಾರಣಿಗಳ ಸಂಬಂಧದ ಬಗ್ಗೆ ಉಂಟಾಗಿರುವ ತಾತ್ವಿಕ ಭಿನ್ನಾಭಿಪ್ರಾಯವನ್ನು ತಿಳಿಗೊಳಿಸಲು ಚಿಂತಕರು, ಮಠಾಧೀಶರು,
ಜನಪ್ರತಿನಿಧಿಗಳ ನಡುವೆ ಅರ್ಥಪೂರ್ಣವಾದ ಚರ್ಚೆ ಅವಶ್ಯವಾಗಿದೆ.

-ಸಂಗಯ್ಯ ಅ. ಹಿರೇಮಠ, ಧಾರವಾಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.