ಭಾನುವಾರ, ಆಗಸ್ಟ್ 18, 2019
25 °C

ನೀತಿ ರಾಜಕಾರಣ ಇರಲಿ

Published:
Updated:

ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾದಂದಿನಿಂದಲೂ ‘ನಮ್ಮ ಸರ್ಕಾರ ಸುಭದ್ರ ವಾಗಿದೆ’ ಎಂಬ ಮಾತನ್ನು ಕೇಳಿ ಕೇಳಿ ಜನ ಜಡ್ಡುಗಟ್ಟಿ ಹೋಗಿದ್ದಾರೆ. ವಿಧಾನಸೌಧ ಒಂದು ಜಾತ್ರೆ ಎನಿಸಿಬಿಟ್ಟಿದೆ.

ಶಾಸಕರು, ಮಂತ್ರಿಗಳು ತಮ್ಮ ಘನತೆಯನ್ನು ಮರೆತಿದ್ದಾರೆ ಎಂಬುದೂ ಸಾಬೀತಾಗಿದೆ. ಮೌಲ್ಯಗಳು ಯಾರನ್ನೂ ಬಾಧಿಸುತ್ತಿಲ್ಲ. ಈಗ ಸರ್ಕಾರಕ್ಕೆ ಬಹುಮತ ಇಲ್ಲದಿರುವುದು ಸ್ಪಷ್ಟವಾಗಿದೆ. ಅತೃಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಂಬಿಕೆಯನ್ನು ಸರ್ಕಾರ ಹೊಂದಿರಬಹುದಾದರೂ, ಸದ್ಯಕ್ಕಂತೂ ವಿಶ್ವಾಸ ಕಳೆದುಕೊಂಡಿರುವುದು ಸ್ಪಷ್ಟ.

ಬಲವಂತದ ವಿಶ್ವಾಸ ಹಾಗೂ ಮೈತ್ರಿಗೆ ಅರ್ಥವಾದರೂ ಎಲ್ಲಿದೆ? ಕುಮಾರಸ್ವಾಮಿ ಅವರು ಭಂಡತನ ತೋರದೆ, ಮುಖ್ಯಮಂತ್ರಿ ಸ್ಥಾನಕ್ಕೆ ಖುದ್ದಾಗಿ ರಾಜೀನಾಮೆ ಸಲ್ಲಿಸುವುದು ನೀತಿ ರಾಜಕಾರಣವಾಗುತ್ತದೆ.

– ಎಂ.ಕೆ.ವಾಸುದೇವರಾಜು, ಮೈಸೂರು

Post Comments (+)