ಶನಿವಾರ, ಜುಲೈ 31, 2021
23 °C

ತೆರಿಗೆ ಪಾವತಿ: ಅರಿವು ಮೂಡಿಸಬೇಕಿದೆ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ತೆರಿಗೆ ಪಾವತಿಗೆ ಹಿಂದೇಟು ಹಾಕಿದ ತಮಿಳು ಚಿತ್ರರಂಗದ ಜನಪ್ರಿಯ ನಟ ವಿಜಯ್‌ ಅವರನ್ನು ಮದ್ರಾಸ್‌ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿರುವುದು (ಪ್ರ.ವಾ., ಜುಲೈ 14) ಸರಿಯಾಗಿದೆ. ಜನಸಾಮಾನ್ಯರು ತಾವು ಕಷ್ಟಪಟ್ಟು ದುಡಿದ ಹಣವನ್ನು ಚಲನಚಿತ್ರ ನೋಡಲು ಸುರಿಯುತ್ತಾರೆ. ಇದರಿಂದ ದೊರೆತ ಪ್ರತಿಫಲವೇ ವಿಜಯ್‌ ಅವರಂತಹ ನಟರಿಗೆ ಹಣದ ಸುರಿಮಳೆಯಾಗುವುದು.

ನ್ಯಾಯಮೂರ್ತಿಯವರ ಪ್ರತೀ ಮಾತು ವಿಜಯ್‌ ಒಬ್ಬರಿಗೆ ಮಾತ್ರವಲ್ಲ, ತೆರಿಗೆ ಪಾವತಿಸಲು ಹಿಂದೇಟು ಹಾಕುವ ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ತೆರಿಗೆ ಹಣದಿಂದಲೇ ಸರ್ಕಾರ ಸಕಲ ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಳ್ಳಲು ಸಾಧ್ಯ ಎಂಬ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ.

- ಬಾಲಕೃಷ್ಣ ಎಂ.ಆರ್., ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.