ಮಂಗಳವಾರ, ಸೆಪ್ಟೆಂಬರ್ 28, 2021
21 °C

ಒಲಿಂಪಿಕ್ಸ್‌: ನಡೆಯಲಿ ಆತ್ಮಾವಲೋಕನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಂದೆರಡು ಪದಕಗಳು ಬಂದಿವೆ. ಇದು ಭಾರತಿಯರೆಲ್ಲರೂ ಸಂತೋಷಪಡುವ ಸಂಗತಿ. ಭೌಗೋಳಿಕವಾಗಿ, ಜನಸಂಖ್ಯಾ ದೃಷ್ಟಿಯಿಂದ ನಮ್ಮದು ದೊಡ್ಡ ದೇಶ. ಉಪಖಂಡವೆಂದೇ ಕರೆಯಲಾಗುವ ಭಾರತಕ್ಕೆ ಇಷ್ಟು ಪದಕಗಳು ಸಾಕೇ ಎಂಬ ಪ್ರಶ್ನೆ ಮೂಡುತ್ತದೆ. ಪಕ್ಕದ ಚೀನಾ ಪದಕಗಳ ಬೇಟೆಯಲ್ಲಿ ಮುಂಚೂಣಿಯಲ್ಲಿದೆ. ಜಗತ್ತಿನ ಸಣ್ಣ- ಪುಟ್ಟ ರಾಷ್ಟ್ರಗಳು ಕೂಡ ಈ ದಿಸೆಯಲ್ಲಿ ಮುಂದಿವೆ. ಆದರೆ ನಾವು ಮಾತ್ರ ಇನ್ನೂ ದೂರದಲ್ಲಿರುವುದಕ್ಕೆ ಕಾರಣವೇನು ಎಂಬ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ನಮ್ಮಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ಆದರೆ, ಅವು ಗಳನ್ನು ಪ್ರೋತ್ಸಾಹಿಸುವ ಕಾಳಜಿ, ಜವಾಬ್ದಾರಿ ಇಲ್ಲವಷ್ಟೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ಪ್ರಶಸ್ತಿ, ಬಹುಮಾನ ನೀಡುತ್ತವೆ. ಆದರೆ ಅದಕ್ಕೂ ಮುನ್ನ ಸ್ಥಳೀಯ ಪ್ರತಿಭೆಗಳಿಗೆ ತಳಮಟ್ಟದಲ್ಲೇ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಬೇಕು. ಆಗ ನಮ್ಮ ಪ್ರತಿಭೆಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಾಧನೆಯನ್ನು ನಿರೀಕ್ಷಿಸಬಹುದು. 

-ಶ್ರೀಧರ್ ಡಿ. ರಾಮಚಂದ್ರಪ್ಪ, ತುರುವನೂರು, ಚಿತ್ರದುರ್ಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.