ಬುಧವಾರ, ಆಗಸ್ಟ್ 4, 2021
27 °C

‘ಮಹಾನ್‌ ನಾಯಕ’ನ ಬಗ್ಗೆ ಅರಿಯಬೇಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾ. ಬಿ.ಆರ್‌.ಅಂಬೇಡ್ಕರ್ ಅವರನ್ನು ಹೆಚ್ಚೆಂದರೆ ಸಂವಿಧಾನ ಶಿಲ್ಪಿ ಅಥವಾ ಅದಕ್ಕೂ ಹೆಚ್ಚೆಂದರೆ ಅವರೊಬ್ಬ ದಲಿತ ನಾಯಕ ಎಂದಷ್ಟೇ ಬಿಂಬಿಸುವ ಮೂಲಕ, ಅವರ ಸಾಧನೆಗಳ ಸರಮಾಲೆಯನ್ನು ಮೊಟಕುಗೊಳಿಸುವ ಪ್ರಯತ್ನ ದಶಕಗಳ ಹಿಂದೆಯೇ ಆರಂಭವಾಗಿದೆ. ಹೀಗಿರುವಾಗ, ಝೀ ಕನ್ನಡ ವಾಹಿನಿಯು ‘ಮಹಾನ್‌ ನಾಯಕ’ ಸಂಚಿಕೆಯ ಮೂಲಕ ಅಂಬೇಡ್ಕರ್ ಅವರ ವ್ಯಕ್ತಿತ್ವದ ಪರಿಚಯ ಮಾಡಿಕೊಡಲು ಮುಂದಾಗಿರುವುದು ಶ್ಲಾಘನೀಯ. ಅವರು ಸೀಮಿತ ವರ್ಗದ ನಾಯಕರಲ್ಲ, ವಿಶ್ವದ ಗಣ್ಯ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುವ, ಶ್ರೇಷ್ಠ ವ್ಯಕ್ತಿತ್ವವುಳ್ಳ ಮಹಾನಾಯಕ ಎಂಬ ಸತ್ಯವನ್ನು ಈ ಧಾರಾವಾಹಿ ವೀಕ್ಷಣೆಯ ಮೂಲಕವಾದರೂ ನಾವು ತಿಳಿದುಕೊಳ್ಳಬೇಕಿದೆ.

- ವಿಜಯಕುಮಾರ್ ಎಸ್. ಸುಜ್ಜಲೂರು, ಟಿ.ನರಸೀಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.