ಉದ್ಯೋಗ ಖಾತರಿ: ಭ್ರಷ್ಟರ ಪಾಲಾಗದಿರಲಿ

ಮಂಗಳವಾರ, ಏಪ್ರಿಲ್ 23, 2019
31 °C

ಉದ್ಯೋಗ ಖಾತರಿ: ಭ್ರಷ್ಟರ ಪಾಲಾಗದಿರಲಿ

Published:
Updated:

ಈ ವರ್ಷ ವಿಪರೀತ ಬರಗಾಲ ಆವರಿಸಿದ್ದು, ಹಳ್ಳಿಗರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಉದ್ಯೋಗ ಖಾತರಿ ಯೋಜನೆಯು ಹೆಸರಿಗೆ ಮಾತ್ರ ಸೀಮಿತವಾಗಿದೆ.

ಕಾಮಗಾರಿಗಳು ಅನುಷ್ಠಾನಕ್ಕೆ ಬಂದರೂ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಸದಸ್ಯರ ಪಾಲಾಗುತ್ತಿವೆ. ಜೆಸಿಬಿ, ಟ್ರ್ಯಾಕ್ಟರ್‌ಗಳ ಮೂಲಕ ಕೆಲಸ ಪೂರ್ಣಗೊಳಿಸಿ, ಹೆಸರಿಗೆ ನಾಲ್ಕಾರು ಜನರನ್ನು ಕರೆತಂದು ಅಧಿಕಾರಿಗಳಿಗೆ ತೋರಿಸಿ ಬಿಲ್ ಮಾಡಿಸಿಕೊಳ್ಳುತ್ತಾರೆ.

ಬಿಲ್ ಆದ ನಂತರ, ಜಾಬ್ ಕಾರ್ಡ್ ಹೊಂದಿರುವವರ ಮುಖಾಂತರ ಹಣ ಬಿಡುಗಡೆಗೊಳಿಸಿ, ಅವರಿಗೆ ₹100, ₹200 ಕೊಟ್ಟು ಉಳಿದ ಹಣವನ್ನೆಲ್ಲ ಭ್ರಷ್ಟಾಚಾರಿಗಳು ಲಪಟಾಯಿಸುತ್ತಿದ್ದಾರೆ. ಈ ಬರಗಾಲದಲ್ಲಾದರೂ ಬಡವರಿಗೆ ಶ್ರಮಕ್ಕೆ ತಕ್ಕ ಫಲ ಸಿಗಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !