ಶುಕ್ರವಾರ, ಜುಲೈ 1, 2022
23 °C

ವಾಚಕರ ವಾಣಿ: ಹಾರೆಗಳಿಗೆ ಅಭಿನಂದನೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾರಿಗೆ ಅಡ್ಡಿಯಾಗಿರುವ ಬಂಡೆಯನ್ನು ಹಾರೆಯಿಂದ ಮೀಟಿ ಎಬ್ಬಿಸಿ ಉರುಳಿಸಬೇಕಾದರೆ, ಆ ಹಾರೆಗೆ ಬಲವಾದ ಸಣ್ಣ ಅಡಿಗಲ್ಲು ಬೇಕಾಗುತ್ತದೆ. ತಮ್ಮ ದಾರಿಗೆ ಅಡ್ಡಿಯಾಗಿದ್ದ ಮೈಸೂರಿನ ಜಿಲ್ಲಾಧಿಕಾರಿ ‘ರೋಹಿಣಿ ಸಿಂಧೂರಿ ಐಎಎಸ್’ ಎಂಬ ಬಂಡೆಯನ್ನು ಮೀಟಿ ಎಬ್ಬಿಸಿ ಅಲ್ಲಿಂದ ಉರುಳಿಸಲು, ರಾಜಕಾರಣಿಗಳೆಂಬ ಹಾರೆಗಳು ಮೈಸೂರು ಮಹಾನಗರಪಾಲಿಕೆಯ ಆಯುಕ್ತೆ ‘ಶಿಲ್ಪಾ ನಾಗ್ ಐಎಎಸ್’ ಎಂಬ ಬಲವಾದ ಸಣ್ಣ ಅಡಿಗಲ್ಲನ್ನು ಬಳಸಿ, ಬಂಡೆಯೊಂದಿಗೆ ಸಣ್ಣ ಅಡಿಗಲ್ಲನ್ನೂ ಉರುಳಿಸಿ ಯಶಸ್ವಿಯಾಗಿದ್ದಾರೆ. ಹಾರೆಗಳಿಗೆ ಅಭಿನಂದನೆ!

–ಪಿ.ಜೆ.ರಾಘವೇಂದ್ರ, ಮೈಸೂರು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು