ಅನೇಕ ಗ್ರಾಮ ಪಂಚಾಯಿತಿಗಳು ಕುಡಿಯುವ ನೀರು ಹಾಗೂ ಬೀದಿ ದೀಪಗಳಿಗಾಗಿ ಬಳಸಿದ ವಿದ್ಯುತ್ ಶುಲ್ಕದ ಬಾಕಿ ಮೊತ್ತವನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ಕಟ್ಟಬೇಕಾಗಿರುವುದು ₹ 3 ಸಾವಿರ ಕೋಟಿಗಿಂತ ಅಧಿಕ ಎಂದು ವರದಿಯಾಗಿದೆ (ಪ್ರ.ವಾ., ಜುಲೈ 14).

ಸಾಮಾನ್ಯ ಜನರು ಸಕಾಲದಲ್ಲಿ ವಿದ್ಯುತ್ ಶುಲ್ಕವನ್ನು ಪಾವತಿಸದಿದ್ದರೆ ಅವರ ಮನೆಗಳ ವಿದ್ಯುತ್ ಸಂಪರ್ಕವನ್ನುಮುಲಾಜಿಲ್ಲದೆ ಕಡಿತಗೊಳಿಸಲಾಗುತ್ತದೆ. ಇಂತಹುದೇ ಕ್ರಮವು ಪಂಚಾಯಿತಿಗಳ ವಿಷಯದಲ್ಲೂ ಆಗಬೇಕಿದೆ. ಇಲ್ಲವೇ ಮುಂಚಿತವಾಗಿ ಹಣ ಸಂದಾಯ ಮಾಡಿ ವಿದ್ಯುತ್ ಖರೀದಿಸುವ ಪದ್ಧತಿಯನ್ನು ಜಾರಿಗೆ ತರಬೇಕು.

ಇದರಿಂದ ವಿದ್ಯುತ್ ಕಂಪನಿಗಳ ಸಮಸ್ಯೆಗೆ ಮುಕ್ತಿ ಸಿಗುವುದು ಮಾತ್ರವಲ್ಲ, ಗ್ರಾಮ ಪಂಚಾಯಿತಿಗಳಲ್ಲೂ ವಿದ್ಯುತ್‌ನ ಸದ್ಬಳಕೆ ಸಾಧ್ಯವಾಗುತ್ತದೆ.
-ನಾಗರಾಜ ಮಸೂತಿ,ಕುರುಗೋಡು, ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.