ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಬಲೀಕರಣ: ಘೋಷಣೆಯ ಗೊಡ್ಡು ಮಂತ್ರ

Last Updated 17 ಜೂನ್ 2021, 19:30 IST
ಅಕ್ಷರ ಗಾತ್ರ

ಡಾ. ಗೀತಾ ವಸಂತ ಅವರು ಬರೆದಿರುವ ಲೇಖನ (ಪ್ರ.ವಾ., ಮೇ 17) ಸಮಾಜದಲ್ಲಿ ಹೆಣ್ಣಿನ ಸ್ಥಾನದ ಮಹತ್ವದ ಕುರಿತು ಅರಿವು ಮೂಡಿಸುವಂತಿದೆ. ಪ್ರಜ್ಞಾವಂತಿಕೆಯನ್ನು ಹೀರಿ ಬೆಳೆಯಬಲ್ಲವಳಾದ ಮಹಿಳೆ, ಸಮಾಜದಲ್ಲಿ ಅಸ್ಮಿತೆಗಾಗಿ, ತನ್ನ ಹಕ್ಕುಗಳ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದಾಳೆ. ದೇಶ ಸ್ವಾತಂತ್ರ್ಯ ಪಡೆದು, ಸಂವಿಧಾನ ಜಾರಿಯಾಗಿ ಎಲ್ಲರಿಗೂ ಸಮಾನ ಅವಕಾಶ ಕೊಟ್ಟಿದ್ದರೂ ಅದರ ಅನುಷ್ಠಾನ ಮಾತ್ರ ಆಮೆಗತಿಯಲ್ಲಿದೆ. ಮಹಿಳಾ ಸಬಲೀಕರಣ ಬರೀ ಘೋಷಣೆಯ ಗೊಡ್ಡು ಮಂತ್ರವಾಗಿದೆ.

ಅನಾದಿ ಕಾಲದಿಂದಲೂ ಅನೇಕ ಸುಧಾರಕರು ಹೆಣ್ಣಿನ ಮೇಲಿನ ದೌರ್ಜನ್ಯಗಳನ್ನು ಖಂಡಿಸಿ ಸುಧಾರಣೆಯ ಹಾದಿ ತೋರಿದ್ದಾರೆ. ಆದರೆ ಅದರ ದಿಕ್ಕು ತಪ್ಪಿಸಿ, ಸಾಂಪ್ರದಾಯಿಕ ರೀತಿ ರಿವಾಜುಗಳ ಮೂಟೆ ಕಟ್ಟಿ ಮುನ್ನಡೆಸುವ ಹುನ್ನಾರ ಇನ್ನೂ ದೂರವಾಗಿಲ್ಲ. ಮಹನೀಯರ ಆದರ್ಶಗಳು ಬರೀ ಮಾತಿನ ಮಂತ್ರಗಳಾಗದೆ, ನಮ್ಮೆಲ್ಲರ ನಡೆನುಡಿಯ ಚೇತನವಾಗಬೇಕಿದೆ.

ಮಲಕಪ್ಪ ಇಂಗಳೇಶ್ವರ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT