ಮಾವಳ್ಳಿ ಅಂಚೆ ಕಚೇರಿಯಲ್ಲಿ ಹಿರಿಯ ನಾಗರಿಕರಿಗೆ ಮತ್ತು ವಯಸ್ಸಾದ ಮಹಿಳೆಯರಿಗೆ ಯಾವ ಸೌಲಭ್ಯಗಳೂ ಇಲ್ಲದೆ ಬಹಳ ತೊಂದರೆಯಾಗಿದೆ. ಅಲ್ಲಿ ಕುಳಿತುಕೊಳ್ಳಲು ಸ್ಥಳವಿಲ್ಲ. ಬಹಳ ಹೊತ್ತು ಸಾಲಿನಲ್ಲಿ ನಿಲ್ಲಬೇಕಾದ್ದರಿಂದ ತೊಂದರೆಯಾಗಿದೆ. ಪತ್ರ ಬರೆಯಲೂ ಯಾವ ಅನುಕೂಲವೂ ಇಲ್ಲ. ಲಕೋಟೆ ಅಂಟಿಸಲು ಅಂಟಿನ ಡಬ್ಬ ಮೊದಲೇ ಇಲ್ಲ. ಲಾಲ್ಬಾಗ್ ಪಶ್ಚಿಮ ದ್ವಾರ ಅಂಚೆ ಕಚೇರಿಯನ್ನು ಮುಚ್ಚಿ, ಅದನ್ನು ಮಾವಳ್ಳಿ ಅಂಚೆ ಕಚೇರಿಗೆ ಸೇರಿಸಿರುವುದರಿಂದ ಕೆಲಸ ಹೆಚ್ಚಾಗಿದ್ದು ಒಬ್ಬ ಪೋಸ್ಟ್ಮಾಸ್ಟರ್ ಹೆಚ್ಚಿನ ಕೆಲಸ ನಿರ್ವಹಿಸಲು ಪರದಾಡುತ್ತಾರೆ. ಜನ ಗಂಟೆಗಟ್ಟಲೆ ಸರದಿಯಲ್ಲಿ ಕಾಯಬೇಕಾಗಿದೆ. ಈ ಅಂಚೆ ಕಚೇರಿಗೆ ಒಂದು ಅಂಚೆಪೆಟ್ಟಿಗೆಯೂ ಇಲ್ಲ. ಟಪಾಲು ಹಾಕಲು ದೂರದಿಂದ ಇಲ್ಲಿಗೆ ಬರಬೇಕಾಗಿದೆ. ಇದು ಬಹಳ ಪ್ರಯಾಸದ ಕೆಲಸ.

ದಯವಿಟ್ಟು ಇದಕ್ಕೆ ಸಂಬಂಧಿಸಿದ ಅಂಚೆ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಂಡು ಕಚೇರಿ ಕೆಲಸಕ್ಕೆ ಇನ್ನೊಬ್ಬ ಸಹಾಯಕರನ್ನು ನೇಮಿಸಬೇಕು ಮತ್ತು ಲಾಲ್ಬಾಗ್ ಪೋರ್ಟ್ ರಸ್ತೆಯಲ್ಲಿ ಮಾರಮ್ಮ ದೇವಸ್ಥಾನದ ಸಮೀಪ ಹಾಗೂ ಉಪ್ಪಾರಹಳ್ಳಿ ಬಳಿ ಅಂಚೆ ಪಟ್ಟಿಗೆಗಳನ್ನು ಅಳವಡಿಸಿ ವಯಸ್ಸಾದವರಿಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.