ಮಂಡ್ಯದಿಂದ ಮೈಸೂರಿನವರೆಗೆ ಎಲ್ಲೆ ಹತ್ತಿ, ಎಲ್ಲೇ ಇಳಿದರೂ ಎಕ್ಸ್‌ಪ್ರೆಸ್ ರೈಲುಗಳಲ್ಲಿ ರೂ. 30 ಟಿಕೆಟ್ ಪಡೆಯಬೇಕಾಗಿದೆ. ಶ್ರೀರಂಗಪಟ್ಟಣದಿಂದ 10 ಕಿ.ಮೀ. ದೂರದ ಮೈಸೂರಿಗೂ ರೂ.30. ಐದು ಕಿ.ಮೀ. ದೂರದ ಪಾಂಡವಪುರ ರೈಲ್ವೆ ನಿಲ್ದಾಣಕ್ಕೂ ರೂ.30 ಪಾವತಿಸಬೇಕಿದೆ. ಈ ಅವೈಜ್ಞಾನಿಕ ಪ್ರಯಾಣ ದರವನ್ನು ರದ್ದುಪಡಿಸಿ, ಗ್ರಾಮೀಣ ಭಾಗದ ಬಡಜನರು ರೈಲಿನಲ್ಲಿ ಪ್ರಯಾಣ ಮಾಡುವಂತಹ ಅನುಕೂಲಕರ ದರ ನಿಗದಿಪಡಿಸಬೇಕೆಂದು ರೈಲ್ವೆ ಇಲಾಖಾಧಿಕಾರಿಗಳಲ್ಲಿ ಮನವಿ.

ಮಂಡ್ಯದಿಂದ ಮೈಸೂರಿಗೆ ಮಧ್ಯಾಹ್ನ 1.30 ರಿಂದ ಸಂಜೆ 6.45 ರವರೆಗೆ ಯಾವುದೇ ಸೆಟಲ್ ರೈಲಿನ ವ್ಯವಸ್ಥೆ ಇಲ್ಲ. ಇದರಿಂದ ಯಲಿಯೂರು, ಬ್ಯಾಡರಹಳ್ಳಿ ಚಂದಗಿರಿಕೊಪ್ಪಲು ವಿಶೇಷವಾಗಿ ಶ್ರೀರಂಗಪಟ್ಟಣದಂತಹ ಪ್ರವಾಸಿ ತಾಣಕ್ಕೂ ಪ್ರಯಾಣಿಸಲು ಸಾಧ್ಯವಿಲ್ಲ. ಈ ಅವಧಿಯಲ್ಲಿ ದಯವಿಟ್ಟು ಎರಡು ಸೆಟಲ್ ರೈಲಿನ ವ್ಯವಸ್ಥೆಗೆ ರೈಲ್ವೆ ಇಲಾಖೆ ಕ್ರಮ ವಹಿಸಲಿ.

ಕಾವೇರಿ, ಟಿಪ್ಪು ಎಕ್ಸ್‌ಪ್ರೆಸ್ ಸೇರಿದಂತೆ ಅನೇಕ ಎಕ್ಸ್‌ಪ್ರೆಸ್ ರೈಲಿನ ನಿಲುಗಡೆ ಶ್ರೀರಂಗಪಟ್ಟಣದಲ್ಲಿ ಇಲ್ಲ. ಇಂತಹ ಐತಿಹಾಸಿಕ ಪ್ರವಾಸಿ ತಾಣದ ನಿಲ್ದಾಣದಲ್ಲೆ ನಿಲುಗಡೆ ವ್ಯವಸ್ಥೆ ಇಲ್ಲವೆಂದರೆ ಹೇಗೆ? ದಯವಿಟ್ಟು ರೈಲ್ವೆ ಇಲಾಖೆ ಅಧಿಕಾರಿಗಳು ಅನುಕೂಲ ಕಲ್ಪಿಸುವ ಕ್ರಮ ಜರುಗಿಸಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.