ವಿಧಾನಸಭೆ ಮತ್ತು ವಿಧಾನ ಪರಿಷತ್‌ಗೆ ಮೊದಲ ಬಾರಿಗೆ ಆಯ್ಕೆಯಾಗಿರುವ ಸದಸ್ಯ ರಿಗೆ ತರಬೇತಿ ಕಾರ್ಯಾಗಾರ ಏರ್ಪಡಿಸಿದ ಉದ್ದೇಶ ಒಳ್ಳೆಯದೇ. ತರಬೇತಿ ನಂತರವಾ ದರೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು, ಕ್ಷೇತ್ರ ದೊಂದಿಗೆ ಉತ್ತಮ ಬಾಂಧವ್ಯ ಹೊಂದಲು, ಭ್ರಷ್ಟಾಚಾರ ಮುಕ್ತವಾಗಿರಲು ಶಾಸಕರು ಕಾರ್ಯೋನ್ಮುಖರಾಗಲಿ!

ಸಂವಿಧಾನದ ಆಶಯ, ಶಾಸನ ರಚನೆ ಮೊದಲಾದ ವಿಷಯಗಳ ಬಗ್ಗೆ ತರಬೇತಿ ನೀಡಲಾಗಿದೆಯಂತೆ. ಸಂತೋಷವೇ. ಜತೆಗೆ ಸದನದ ಕಲಾಪ ನಡೆಯುವಾಗ, ‘ನಿದ್ದೆ ಮಾಡದಿರುವ ಬಗ್ಗೆ’, ಮೊಬೈಲ್‌ನಲ್ಲಿ ‘ಬ್ಲೂ’ ಆಟೋಟ ಆಡದಿರುವ ಬಗ್ಗೆ, ಕಪ್ಪು ಹಣ ಇಡದಿರುವ ಬಗ್ಗೆ, ಸುಳ್ಳು ಭರವಸೆ ನೀಡದಿ ರುವ ಬಗ್ಗೆ, ಆಗಾಗ್ಗೆ ಕ್ಷೇತ್ರಕ್ಕೆ ಮುಖದರ್ಶನ ಮಾಡುವ ಅಗತ್ಯದ ಬಗ್ಗೆ, ಅಧಿಕಾರಕ್ಕಾಗಿ ಮತ ಧರ್ಮಗಳಲ್ಲಿ ವಿಷ ಬೀಜ ಬಿತ್ತದಿರುವ ಬಗ್ಗೆ, ಮೊಸಳೆ ಕಣ್ಣೀರು ಸುರಿಸದಿರುವ ಕುರಿತೂ ತರಬೇತಿಯ ಅಗತ್ಯ ಇತ್ತು. ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.