ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯ ಅನಾಹುತ ತಪ್ಪಿಸಿ

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕರಾವಳಿಯ ಮೀನುಗಾರರ ಪಾಲಿಗೆ ಮಂಗಳೂರು ಅಳಿವೆ ಬಾಗಿಲು ಮತ್ತೊಮ್ಮೆ ದುರಂತದ ಬಾಯಿ ತೆರೆದಿದೆ. ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಪ್ರತೀ ವರ್ಷವೂ ಜೀವ ಕಳೆದುಕೊಳ್ಳುವ ಅಮಾಯಕ ಮೀನುಗಾರರ ಪಟ್ಟಿಗೆ ಮತ್ತೆ ಹೊಸಬರೂ ಸೇರ್ಪಡೆಯಾಗಿ ಕಡಲ ಭೋರ್ಗರೆತದೊಂದಿಗೆ ಅವರೂ ಬೆರೆತು- ಮರೆತು ಹೋಗುವ ಮುನ್ನ ಒಂದಿಷ್ಟು ಮಾನವೀಯ ಕಳಕಳಿಯಿಂದ ಯೋಚಿಸಬೇಕಿದೆ.

ಈ ಬಾರಿಯ ದುರಂತದಲ್ಲಿ ಪವಾಡಸದೃಶ ರೀತಿಯಲ್ಲಿ ಬದುಕಿ ಬಂದಿದ್ದ ವ್ಯಕ್ತಿಯೂಬ್ಬ ಸೇರಿದಂತೆ ಕಣ್ಮರೆಯಾಗಿ ಕಡಲು ಸೇರಿದ ಇತರ ಆರು ಮಂದಿ ಮೀನುಗಾರರೂ ಕಡಲ ಭೀಷಣ ನರ್ತನದೊಂದಿಗೇ, ದಡದಲ್ಲಿದ್ದ ಮನುಷ್ಯರ ಭೀಕರ ಕ್ರೌರ್ಯವನ್ನು ಅಕ್ಷರಶಃ ಕಂಡುಂಡು ನೀರುಪಾಲಾದರೆಂಬುದೇ ವಿಷಾದಕರ.

ಕೇಂದ್ರ ಸರ್ಕಾರದ ಸುಪರ್ದಿಗೆ ಬರುವ ಬಂದರು ಆಡಳಿತದ ಈ ರೀತಿಯ ಅಮಾನವೀಯ ವರ್ತನೆ ಇದೇ ಮೊದಲ ಸಲವಲ್ಲವಾದರೂ, ಸ್ಥಳೀಯ ಸರ್ಕಾರವಾಗಲಿ, ಸಂಬಂಧಿಸಿದ ಇಲಾಖೆಯಾಗಲಿ ಈ ಬಗ್ಗೆ ಯಾವ ಸುಧಾರಿತ ಕ್ರಮಗಳನ್ನೂ ತೆಗೆದುಕೊಂಡಂತಿಲ್ಲ. ಈ ಹಿನ್ನೆಲೆಯಲ್ಲಿ ಇಂತಹ ಅನಾಹುತಗಳು ಮತ್ತೆ ಮರುಕಳಿಸದಂತೆ ಸಂಬಂಧಿಸಿದವರು ಕ್ರಮಕೈಗೊಳ್ಳುವರೇ?

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT