ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತನಾರ್ಹ ಧೋರಣೆ

Last Updated 21 ಮೇ 2012, 19:30 IST
ಅಕ್ಷರ ಗಾತ್ರ

ಸಂಸ್ಕೃತ ಕಲಿಕೆ ಕುರಿತು ಜಿ. ಚೆನ್ನವೀರಸ್ವಾಮಿ ಅವರ ಪತ್ರ `ಸಂಕುಚಿತ ಮತಿ~ಗಳ ಕಣ್ಣು ತೆರೆಸುತ್ತದೆ (ಪ್ರ ವಾ ವಾ ಮೇ.17). ಅನ್ಯರು ಮುಖಕ್ಕೆ ಮಂಗಳಾರತಿ ಎತ್ತಿದಾಗಲೇ ವಿಪ್ರ ಸಮಾಜಕ್ಕೆ ಜ್ಞಾನೋದಯವಾಗುತ್ತದೆ.

ಉಡುಪಿಯ ಮಾಧ್ವರು, ಗೋಕರ್ಣದ ಹವ್ಯಕರಿಗೆ ತಾವಷ್ಟೆ ಬ್ರಹ್ಮಬೀಜ ಸಮುತ್ಪನ್ನರೆಂಬ ಭ್ರಮೆ ಇರಬಹುದು. ಅವರ ಕಣ್ಣಿಗೆ ಶ್ರಿವೈಷ್ಣವರು ದಲಿತರಂತೆ ಕಂಡರೂ ಅಚ್ಚರಿಯಿಲ್ಲ.

ಆದರೆ ಈ ಶ್ರಿ ವೈಷ್ಣವ ದಲಿತರು ಮೇಲುಕೋಟೆಯಲ್ಲಿ ಮಾಡುತ್ತಿರುವುದೇನು? ಗುಂಪುಗಾರಿಕೆ, ಅಂತಃಕಲಹ, ಇವರಲ್ಲಿ ಇರುವ `ಯು~ ಮತ್ತು `ವೈ~ (ವಡಗಲೈ ತೆಂಗಲೈ) ಬಣಗಳಲ್ಲಿ ಯಾರು `ಬಲಗೈ~ ಯಾರು `ಎಡಗೈ~ ಎಂಬುದು ಇನ್ನೂ ತೀರ್ಮಾನವಾಗಿಲ್ಲ.

 ದೇವರ ಮೂಲ ವಿಗ್ರಹದಲ್ಲಿ `ಯು~ ಗುರುತಿನ ನಾಮವ್ದ್ದಿದ ಕಡೆ ಮಧ್ಯದಲ್ಲಿ ಗೂಟ ಹೊಡೆಯುವ ಸಂಭ್ರಮ ಒಂದು ವರ್ಗಕ್ಕೆ. `ವೈ~ ಇದ್ದಲ್ಲಿ ಗೂಟ ಕೀಳುವ ಸಂಭ್ರಮ ಮತ್ತೊಂದು ಬಣಕ್ಕೆ. ಒಬ್ಬರ ಆಚಾರ್ಯರ ಸನ್ನಿಧಿಯಲ್ಲಿ ಮತ್ತೊಬ್ಬರು ಮಂಗಳಾಶಾಸನ ಮಾಡುವುದೆಂದರೆ ಸೂತಕದ ಮನೆಯಲ್ಲಿ ಚರಮಶ್ಲೋಕ ಪಠಿಸಿದಷ್ಟೆ ಅಮಂಗಳ.

ಇನ್ನಿವರು ಸಂಸ್ಕೃತ ಕಲಿತು ಕೆತ್ತುವುದೇನು? `ಕಂಬಮೆ ತಣ್ಣಿ, ರಂಗನೇ ದೈವಮ್ ಪೊಂಗಲ್ ಪ್ರಸಾದಂ~ ಎಂದು ಜೊಲ್ಲು ಸುರಿಸುವವರಿಗೆ ಸಂಸ್ಕೃತದ ಮೇಲಣ ಮೋಹ ಅಷ್ಟಕ್ಕಷ್ಟೆ. ತ್ರಿಮತಸ್ಥರಲ್ಲಿ, ಇದ್ದುದರಲ್ಲಿ ಹೊಯ್ಸಳ ಕರ್ನಾಟಕ ಪಂಗಡದವರು ಉದಾರ ನಿಲುವು ತಳೆದವರು.

ಅವರು ಮನಸ್ಸು ಮಾಡಿದರೆ ಶ್ರಿ ವೈಷ್ಣವರೂ ಸೇರಿದಂತೆ ದಲಿತರು, ಅಲ್ಪಸಂಖ್ಯಾತರನ್ನು ತಮ್ಮ ತೆಕ್ಕೆಯೊಳಗೆ ತಂದುಕೊಂಡು ಸಂಸ್ಕೃತ ಕಲಿಸಬಹುದು. ಅನುದಾನದ ವಿಷಯದಲ್ಲಿ ಚೆನ್ನವೀರ ಸ್ವಾಮಿ ಅವರ ಧೋರಣೆ ಚಿಂತನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT