ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022ರ ವೇಳೆಗೆ ರೈತರ ಆದಾಯ ದುಪಟ್ಟು ಮಾಡುವ ಗುರಿ: ಮೋದಿ 

Last Updated 20 ಜೂನ್ 2018, 9:12 IST
ಅಕ್ಷರ ಗಾತ್ರ


ನವದೆಹಲಿ: ದೇಶದ ರೈತರ ಆದಾಯವನ್ನು 2022ರ ವೇಳೆಗೆ ದುಪಟ್ಟು ಮಾಡುವ ಗುರಿಯನ್ನು ನಾವು ಹೊಂದಿದ್ದು ಈ ಬಗ್ಗೆ ಕಾರ್ಯವೃತ್ತರಾಗಿದ್ದೇವೆ.ರೈತರಿಗೆ ಅಗತ್ಯವಿರುವ ಸೌಕರ್ಯಗಳನ್ನು ಮಾಡಿಕೊಡಲಾಗುವುದು.ದೇಶದ ರೈತರ ಮೇಲೆ ನಂಬಿಕೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬುಧವಾರ ಬೆಳಗ್ಗೆ ನಮೋ ಆ್ಯಪ್ ಲೈವ್ ವಿಡಿಯೊ ಮೂಲಕ ಮೋದಿ ರೈತರೊಡನೆ ಸಂವಾದ ನಡೆಸಿದ್ದಾರೆ.

ಮೋದಿ ಸಂವಾದದ ಮುಖ್ಯಾಂಶಗಳು
* ದೇಶದ ಪ್ರತಿಯೊಬ್ಬ ರೈತನಿಗೂ ಸೂಕ್ತ ನೀರಾವರಿ ವ್ಯವಸ್ಥೆ ಕಲ್ಪಿಸುವ ಗುರಿಯನ್ನು ನಾವು ಹೊಂದಿದ್ದೇವೆ.
* ಬ್ಲೂ ರೆವಲ್ಯೂಷನ್ (ನೀಲಿ ಕ್ರಾಂತಿ) ಮೂಲಕ ನಾವು ಮೀನು ಕೃಷಿಯಲ್ಲಿ ಶೇ. 26ರಷ್ಟು ಅಭಿವೃದ್ಧಿಯನ್ನು ಸಾಧಿಸಿದ್ದೇವೆ, ಅದೇ ವೇಳೆ ಕ್ಷೀರೋದ್ಯಮದಲ್ಲಿ ಶೇ. 24ರಷ್ಟು ಪ್ರಗತಿ ಸಾಧಿಸಿದ್ದೇವೆ.
* ಈ ಹಿಂದಿನ ಸರ್ಕಾರ ಬಜೆಟ್‍ನಲ್ಲಿ ಕೃಷಿ ವಲಯಕ್ಕಾಗಿ ₹1,21,000 ಕೋಟಿ ಮೀಸಲಿರಿಸಿತ್ತು. ಆದರೆ ನಾವು ₹2,12,000 ಕೋಟಿ ಹಣ ಮೀಸಲಿರಿಸಿದ್ದೇವೆ.
* ದೇಶದಾದ್ಯಂತವಿರುವ ರೈತರ ಬೆಳೆಗಳಿಗೆ ವಿಮೆ ನೀಡಲಾಗಿದೆ, ಇದರಿಂದಾಗಿ ಕೃಷಿ ನಷ್ಟದ ನೋವಿನಿಂದ ಅವರು ಬಳಲಬೇಕಾಗಿಲ್ಲ.
* ನಾವು 'ಮಣ್ಣಿನ ಗುಣಮಟ್ಟದ ಕಾರ್ಡ್' ಆರಂಭಿಸಿದ್ದು, ಈ ಮೂಲಕ ತಮ್ಮ ಜಮೀನಿನಲ್ಲಿ ಯಾವ ಬೆಳೆಯನ್ನು ಬೆಳೆಯಬಹುದು ಎಂಬುದರ ಬಗ್ಗೆ ಅವರಿಗೆ ಮಾಹಿತಿ ನೀಡಲಾಗುತ್ತದೆ. ಈ ಮೂಲಕ ಅವರು ಉತ್ತಮ ಬೆಳೆ ಬೆಳೆಯುವಂತಾಗಿದೆ,.
* ಎಲ್ಲ ರೈತರು ಧನಾತ್ಮಕವಾಗಿ ಚಿಂತಿಸಿ ಎಂದು ನಾನು ವಿನಂತಿಸುತ್ತೇನೆ, ನಿಮಗೆ ಉತ್ತಮ ಸೌಲಭ್ಯವನ್ನು ಕಲ್ಪಿಸಲು ನಮ್ಮ ಸರ್ಕಾರ ಸತತ ಪ್ರಯತ್ನ ಮಾಡುತ್ತಿದೆ.
* ಈ ಹಿಂದೆ ಗೊಬ್ಬರ ಪಡೆಯುವುದಕ್ಕಾಗಿ ಸರದಿ ಸಾಲಿನಲ್ಲಿ ನಿಲ್ಲಬೇಕಾಗಿ ಬರುತ್ತಿತ್ತು, ಆದರೆ ಈಗ ರೈತರಿಗೆ ತುಂಬಾ ಸುಲಭವಾಗಿ ಗೊಬ್ಬರ ಸಿಗುತ್ತಿದೆ, ಅಷ್ಟೇ ಅಲ್ಲದೆ ಶೇ. 100 ಬೇವು ಲೇಪಿತ ಯೂರಿಯಾ ಲಭ್ಯವಿದೆ.
* ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವಂತೆ ಮಾಡಲು e-Nam ವೇದಿಕೆಯು ರೈತರಿಗೆ ಸಹಾಯ ಮಾಡುತ್ತಿದೆ, ರೈತರ ಮತ್ತು ಮಾರುಕಟ್ಟೆ ನಡುವೆ ಮಧ್ಯವರ್ತಿಗಳ ಪಾತ್ರ ಇಲ್ಲದಂತೆ ಮಾಡಲು ನಾವು ಬಯಸುತ್ತೇವೆ.
* ಬೀಜ ಬಿತ್ತನೆಯಿಂದ ಹಿಡಿದು ಬೆಳೆಗಳನ್ನು ಮಾರಾಟ ಮಾಡುವವರೆಗಿನ ಎಲ್ಲ ಹಂತಗಳಲ್ಲಿ ರೈತರಿಗೆ ಸಹಾಯ ಮಾಡಲು ನಾವು ಬಯಸುತ್ತೇವೆ, ರೈತರ ಸಂಕಷ್ಟಗಳನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT