ಭಾನುವಾರ, ಸೆಪ್ಟೆಂಬರ್ 26, 2021
28 °C

ಒಗ್ಗೂಡಿಸುವ ‌ಕಾಂಗ್ರೆಸ್, ವಿಭಜಿಸುವ‌ ಬಿಜೆಪಿ: ಹನುಮಂತಯ್ಯ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ‘ಎಲ್ಲರನ್ನೂ ಒಳಗೊಳ್ಳುವ ಕಾಂಗ್ರೆಸ್‌ ರಾಜಕೀಯ ‌ಸಿದ್ಧಾಂತ ಮತ್ತು ‌ದೇಶದ ‌ಜನರನ್ನು‌ ವಿಭಜಿಸುವ‌ ಬಿಜೆಪಿ ಸಿದ್ಧಾಂತದ ನಡುವಿನ ಹೋರಾಟದಲ್ಲಿ ಮತದಾರರು ಪ್ರಜಾಸತ್ತಾತ್ಮಕವಾದ ಮೈತ್ರಿ ಅಭ್ಯರ್ಥಿ‌ ವಿ.ಎಸ್. ಉಗ್ರಪ್ಪ ಅವರನ್ನು  ಬೆಂಬಲಿಸಬೇಕು’ ಎಂದು ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ಹೇಳಿದರು.

ಪ್ರಜಾಪ್ರಭುತ್ವ ವಿರೋಧಿಯಾದ ಸರ್ವಾಧಿಕಾರಿ ಆಡಳಿತ ಮೋದಿಯವರದ್ದು. ತಮ್ಮ ಸರ್ಕಾರದ ಸಚಿವರಿಗೆ‌ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಮೋದಿ ಅವಕಾಶ ನೀಡಲೇ ಇಲ್ಲ. ಅಂಥ ಮೋದಿಯನ್ನು ನೋಡಿ ಮತ ಹಾಕಿ ಎಂದು ಅಭ್ಯರ್ಥಿ ಗಳು ಕೇಳುತ್ತಿರುವುದು ವಿಪರ್ಯಾಸ ಎಂದು ನಗರದಲ್ಲಿ ಶನಿವಾರ ಸುದ್ದಿ ಗೋಷ್ಠಿಯಲ್ಲಿ ವಿಷಾದಿಸಿದರು.

ಇದನ್ನೂ ಓದಿ... ಮತ ಚಲಾಯಿಸದ ಉಗ್ರಪ್ಪ: ಸಾಮಾಜಿಕ‌ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ

ಪ್ರಧಾನಿ ಮೋದಿ ಐದು ವರ್ಷಗಳಲ್ಲಿ ಯಾವ ಭರವಸೆ ಗಳನ್ನೂ ಈಡೇರಿಸಲಿಲ್ಲ. ಭಯೋತ್ಪಾದಕ ರ ಮೇಲಿನ ದಾಳಿಯನ್ನು, ರಾಷ್ಟ್ರೀಯ ಭದ್ರತೆಯ ವಿಚಾರವನ್ನು ಅವರು ಚುನಾವಣೆ ಪ್ರಚಾರಕ್ಕೆ ಬಳಸುತ್ತಿರುವುದು ಖಂಡನೀಯ ಎಂದರು.

ಚುನಾವಣೆ ಯು ರಾಷ್ಟ್ರಭಕ್ತರು ಮತ್ತು ಭಕ್ತರಲ್ಲದವರ ನಡುವಿನ ಹೋರಾಟ ಎಂದು ಬಿಜೆಪಿ‌ ಬಿಂಬಿಸುತ್ತಿದೆ. ಆದರೆ ಚುನಾವಣೆಯು ನಕಲಿ‌ ದೇಶಭಕ್ತರು ಮತ್ತು ನಿಜವಾದ ದೇಶ ಭಕ್ತರ ನಡುವಿನ ಹೋರಾಟ ಎಂದು ಪ್ರತಿಪಾದಿಸಿದರು.

ಸ್ವಚ್ಛ ಭಾರತ್ ಕಾರ್ಯಕ್ರಮದ ಜಾಹೀರಾತಿಗೆ ಕೋಟಿಗಟ್ಟಳೆ ಖರ್ಚು ಮಾಡಿರುವ ಕೇಂದ್ರ ಸರ್ಕಾರವು ದೇಶದ ಶೇ ೫೦ ಪೌರಕಾರ್ಮಿಕರಿಗೆ ವೇತನವನ್ನೇ ನೀಡಿಲ್ಲ ಎಂದು ಆರೋಪಿಸಿದರು.

ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿರುವ ಬಗ್ಗೆ, ಕಪ್ಪು ಹಣವನ್ನು ತರದೇ ಇರುವ ಬಗ್ಗೆ‌ ಮಾತನಾಡದ ಮೋದಿ ಮತ್ತೆ ಐದು ವರ್ಷಗಳ ಕಾಲ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿರುವುದು ಆತಂಕಕಾರಿ ಸಂಗತಿ ಎಂದರು.

‘ಕುಮಾರಸ್ವಾಮಿ ಹೇಳಿಕೆ ಸರಿ’
‘ಎರಡು ಹೊತ್ತು ಊಟಕ್ಕೆ ಗತಿ ಇಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂದು ಮುಖ್ಯಮಂತ್ರಿ ಎಚ್.ಡಿ.‌ಕುಮಾರಸ್ವಾಮಿ ಸರಿಯಾಗಿಯೇ ಮಗ ಹೇಳಿದ್ದಾರೆ. ಸೈನ್ಯಕ್ಕೆ ಸೇರಲು ಇರುವ ಹಲವು ಕಾರಣಗಳಲ್ಲಿ ಬಡತನವೂ ಒಂದು ಪ್ರಮುಖ ಕಾರಣ’ ಎಂದು ಪ್ರತಿಪಾದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು