ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Bicycle Day 2021: ಬೈಸಿಕಲ್ ದಿನವನ್ನು ಏಕೆ, ಯಾವಾಗ ಆಚರಿಸಲಾಗುತ್ತದೆ? 

ಅಕ್ಷರ ಗಾತ್ರ

ಇಂದು ಜೂನ್ 3. ವಿಶ್ವಸಂಸ್ಥೆಯು ಈ ದಿನವನ್ನು ವಿಶ್ವ ಬೈಸಿಕಲ್ ದಿನವೆಂದು ಗೊತ್ತು ಮಾಡಿದೆ. ಹೀಗಾಗಿ ವಿಶ್ವದಾದ್ಯಂತ ಇಂದು ಬೈಸಿಕಲ್‌ ದಿನ ಆಚರಿಸಲಾಗುತ್ತಿದೆ.

ಕೈಗೆಟುಕಬಲ್ಲ ಸಾರಿಗೆ ವ್ಯವಸ್ಥೆಯಾಗಿರುವ ಸೈಕ್ಲಿಂಗ್‌ನಿಂದ ಎಲ್ಲಾ ವಯೋಮಾನದವರಿಗೂ ಅಪಾರ ಆರೋಗ್ಯ ಲಾಭವಿದೆ. ಅಷ್ಟೇ ಅಲ್ಲ, ಪರಿಸರ ಸಂರಕ್ಷಣೆಯೂ ಸಾಧ್ಯ. ಹೀಗಾಗಿಯೇ ಬೈಸಿಕಲ್‌ ದಿನಕ್ಕೆ ಹಿಂದಿನಿಂದಲೂ ಪ್ರಾಮುಖ್ಯತೆ ಇದೆ.

ಸೈಕ್ಲಿಂಗ್‌ ಸಮಯ ಉಳಿತಾಯ ಮಾಡುತ್ತದೆ. ಟ್ರಾಫಿಕ್‌ ಜಾಮ್‌ನಿಂದ ಉಂಟಾಗುವ ಅತೀವ ಒತ್ತಡವನ್ನು ಸೈಕ್ಲಿಂಗ್‌ದೂರಮಾಡುತ್ತದೆ ಎಂದು ಸೈಕಲ್‌ ಅನ್ನುತಮ್ಮ ಪ್ರಮುಖ ಸಾರಿಗೆ ಸಾಧನವಾಗಿನಿರಂತರವಾಗಿ ಬಳಸುತ್ತಿರುವವರು ಅಭಿಪ್ರಾಯಪಟ್ಟಿದ್ದಾರೆ.

ಬೈಸಿಕಲ್‌ ದಿನವನ್ನು ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ

1. ಬೈಸಿಕಲ್ ಬಳಕೆಯಿಂದ ವಾಹನ ಮೂಲದಇಂಗಾಲದ ಡೈ ಆಕ್ಸೈಡ್‌ಉತ್ಪತ್ತಿಯನ್ನು ಕಡಿಮೆ ಮಾಡಬಹುದು. ಇದುಹಸಿರುಮನೆ ಪರಿಣಾಮವನ್ನು ತಗ್ಗಿಸುತ್ತದೆ. ಈ ಮೂಲಕ ಪರಿಸರ ಸಂರಕ್ಷಣೆಯೂ ಸಾಧ್ಯವಾಗುತ್ತದೆ.

2. ಸೈಕ್ಲಿಂಗ್ ಆರೋಗ್ಯಕರ ಜೀವನಕ್ಕೆ ಕಾರಣವಾಗುತ್ತದೆ. ಸೈಕ್ಲಿಂಗ್ ಹೃದಯರಕ್ತನಾಳಗಳನ್ನು ಶಕ್ತಗೊಳಿಸುತ್ತದೆ. ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ಸಂಚಾರ, ಸಾರಿಗೆ ಕಾರಣದ ಖರ್ಚು ವೆಚ್ಚಗಳನ್ನು ಬೈಸಿಕಲ್‌ ಬಳಕೆಯಿಂದ ಕಡಿಮೆ ಮಾಡಬಹುದು.


ಟ್ವಿಟರ್‌ನಲ್ಲಿ ಟ್ರೆಂಡ್‌ ಆದ#WorldBicycleDay

ವಿಶ್ವ ಬೈಸಿಕಲ್‌ ದಿನದ ಅಂಗವಾಗಿ#WorldBicycleDayಎಂಬ ಹ್ಯಾಷ್‌ ಟ್ಯಾಗ್‌ ಸಮಾಜಿಕ ತಾಣಗಳಲ್ಲಿ ಟ್ರೆಂಡ್‌ ಆಗಿದೆ.ಬೈಸಿಕಲ್‌ ಬಳಕೆಯಿಂದ ಆಗುವ ಪ್ರಯೋಜನಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯನ್ನು ಪ್ರತಿಪಾದಿಸಲಾಗಿದೆ.

ಸೈಕ್ಲಿಂಗ್ ಸಂಸ್ಕೃತಿ ಉತ್ತೇಜಿಸೋಣ: ವೆಂಕಯ್ಯ ನಾಯ್ಡು

‘ಸೈಕ್ಲಿಂಗ್ ಸಂಸ್ಕೃತಿಯನ್ನು ಉತ್ತೇಜಿಸಲು, ಆರೋಗ್ಯ ಮತ್ತು ಪರಿಸರ ಪ್ರಯೋಜನಗಳನ್ನು ಪಡೆದುಕೊಳ್ಳಲು #WorldBicycleDayಯ ಈ ದಿನ ನಾವು ಪ್ರಯತ್ನ ಮಾಡೋಣ. ಬೈಸಿಕಲ್ ಎನ್ನುವುದು ಕೈಗೆಟುಕುವ ಮತ್ತು ಸುಸ್ಥಿರ ಸಾರಿಗೆ ವಿಧಾನ. ಇದು ನಮ್ಮನ್ನು ಸದೃಢವಾಗಿರಲುಸಹಾಯ ಮಾಡುತ್ತದೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಾಲಿನ್ಯವನ್ನು ತಗ್ಗಿಸುತ್ತದೆ,‘ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವಿಟರ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.


ಬೈಸಿಕಲ್‌ ಪ್ರಯೋಜನಗಳನ್ನು ತಿಳಿಸಿದ ವಿಶ್ವಸಂಸ್ಥೆ

ಬೈಸಿಕಲ್‌, ಉತ್ತಮ ಸಾರಿಗೆ ವ್ಯವಸ್ಥೆ, ಪರಿಸರ ಉಳಿವಿನ ಕಾರ್ಯತಂತ್ರ, ಶಿಕ್ಷಣ, ಆರೋಗ್ಯ ವ್ಯವಸ್ಥೆಯನ್ನು ಪಡೆಯುವ ಸಾಧನ ಎಂದು ವಿಶ್ವ ಸಂಸ್ಥೆ ಟ್ವೀಟ್‌ ಮಾಡಿದೆ.

ಜೀವನಶೈಲಿಯಭಾಗವನ್ನಾಗಿಸೋಣ

ಬೈಸಿಕಲ್ ಸರಳ, ಕೈಗೆಟುಕುವ, ವಿಶ್ವಾಸಾರ್ಹ, ಸ್ವಚ್ಛ ಮತ್ತು ಪರಿಸರಕ್ಕೆ ಹೊಂದುವ ಸಾರಿಗೆ ಸಾಧನವಾಗಿದೆ.

ವಿಶ್ವ ಬೈಸಿಕಲ್‌ ದಿನವಾದ ಇಂದು, ಬೈಸಿಕಲ್‌ನೊಂದಿಗಿನ ನಮ್ಮ ನೆನಪುಗಳನ್ನು ಮೆಲುಕು ಹಾಕುತ್ತಾ, ಅವುಗಳನ್ನು ನಮ್ಮಜೀವನಶೈಲಿಯ ಒಂದು ಭಾಗವನ್ನಾಗಿಸೋಣ ಎಂದು ಕೇಂದ್ರ ಪಶು ಸಂಗೋಪನಾ ಸಚಿವ ಪ್ರತಾಪ್‌ ಸಾರಂಗಿ ಟ್ವಿಟರ್‌ನಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.

ಪ್ರತಾಪ್‌ ಸಾರಂಗಿ ಒಡಿಶಾದ ಬಾಲಸೋರ್‌ನ ಬಿಜೆಪಿ ಸಂಸದರೂ ಹೌದು. ಅವರು ತಮ್ಮಸಾರಿಗೆ–ಸಂಚಾರಕ್ಕೆ ಬೈಸಿಕಲ್‌ಬಳಸಿ ಖ್ಯಾತಿಗಳಿಸಿದವರು.

***

ಜೀವನವು ಬೈಸಿಕಲ್ ಸವಾರಿ ಇದ್ದಂತೆ. ಅದುಸಮತೋಲನ ಕಾಪಾಡುತ್ತದೆ. ನಿಮ್ಮನ್ನು ಚಲನಶೀಲನರನ್ನಾಗಿ ಮಾಡುತ್ತದೆ.

- ಆಲ್ಬರ್ಟ್ ಐನ್‌ಸ್ಟೈನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT