ಪರಿಸರವನ್ನು ಸಮತೋಲನದಲ್ಲಿರಿಸುವಲ್ಲಿ ಪಕ್ಷಿಗಳ ಪಾತ್ರ ಪ್ರಮುಖವಾಗಿದೆ. ಆದರೆ, ಪ್ರಸ್ತುತ ದಿನಗಳಲ್ಲಿ ಮಾನವನ ಅತಿಯಾಸೆ, ಹವಾಮಾನ ಬದಲಾವಣೆ ಮತ್ತು ವನ್ಯಜೀವಿಗಳ ಭೇಟಿಯಂತಹ ಕಾನೂನು ವಿರೋಧಿ ಚಟುವಟಿಕೆಯಿಂದಾಗಿ ಪಕ್ಷಿ ಪ್ರಭೇದವನ್ನು ರಕ್ಷಿಸುವ ಕಾರ್ಯ ಆಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರತೀ ವರ್ಷ ರಾಷ್ಟ್ರೀಯ ಪಕ್ಷಿ ದಿನವನ್ನು (National Birds Day) ಆಚರಣೆ ಮಾಡಲಾಗುತ್ತದೆ.

ರಾಷ್ಟ್ರೀಯ ಪಕ್ಷಿ ದಿನ 2026 ಅನ್ನು ಇಂದು (ಜನವರಿ 5) ಆಚರಿಸಲಾಗುತ್ತಿದೆ. ಈ ದಿನವನ್ನು ಸಂರಕ್ಷಕರು, ಪರಿಸರ ಸಂರಕ್ಷಣೆ ಉದ್ದೇಶ ಹೊಂದಿರುವ ಎನ್ಜಿಒಗಳು , ಪಕ್ಷಿ ವೀಕ್ಷಕರು ಮತ್ತು ಪ್ರಕೃತಿ ಮೇಲೆ ವಿಶೇಷ ಉತ್ಸಾಹ ಹೊಂದಿರುವವರು, ಪಕ್ಷಿಗಳಿಗೆ ಸಂಬಂಧಿಸಿದ ಕಾರ್ಯಾಗಾರ ಹಾಗೂ ಪಕ್ಷಿಗಳನ್ನು ಯಾವ ರೀತಿಯಲ್ಲಿ ಕಾಪಾಡಬೇಕು ಮತ್ತು ಪರಿಸರ ವ್ಯವಸ್ಥೆಯಲ್ಲಿ ಪಕ್ಷಿಗಳ ಮಹತ್ವವನ್ನು ತಿಳಿಸುವ ಮೂಲಕ ಈ ದಿನವನ್ನು ಆಚರಣೆ ಮಾಡುತ್ತಾರೆ.

ರಾಷ್ಟ್ರೀಯ ಪಕ್ಷಿ ದಿನದ ಇತಿಹಾಸ

ಹಿಂಸೆಯಿಂದ ಪಕ್ಷಿಗಳನ್ನು ಸಂರಕ್ಷಿಸಲು ಹಾಗೂ ಅಳಿವಿನಂಚಿನಲ್ಲಿರುವ ಪ್ರಬೇಧಗಳನ್ನು ಕಾಪಾಡುವ ಉದ್ದೇಶದಿಂದ ಹುಟ್ಟಿಕೊಂಡಿರುವ ಸಂಸ್ಥೆಯಾದ ‘ಬಾರ್ನ್ ಫ್ರೀ ಯುಎಸ್ಎ ಮತ್ತು ಏವಿಯನ್ ವೆಲ್ಫೇರ್ ಒಕ್ಕೂಟ’ವು 2002 ರಲ್ಲಿ ರಾಷ್ಟ್ರೀಯ ಪಕ್ಷಿ ದಿನವನ್ನು ಸ್ಥಾಪಿಸಿತು. ಇದು ಕಾಡಿನ ಪ್ರಾಣಿ, ಪಕ್ಷಿಗಳನ್ನು ಮನೆಯಲ್ಲಿ ಸಾಕುವುದು, ಕಾಡು ಜೀವಿಗಳ ಆವಾಸ ಸ್ಥಾನದ ನಾಶ, ಮಾಲಿನ್ಯ ಮತ್ತು ಅನೈತಿಕ ಸಂತಾನೋತ್ಪತ್ತಿಯ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ಸಂಸ್ಥೆಯಾಗಿದೆ.

ಬಾರ್ನ್ ಫ್ರೀ USA ವರದಿಯ ಪ್ರಕಾರ, ವಿಶ್ವದ ಸರಿಸುಮಾರು 10,000 ಪಕ್ಷಿ ಪ್ರಭೇದಗಳಲ್ಲಿ ಶೇ 12 ರಷ್ಟು ಪಕ್ಷಿ ಪ್ರಬೇಧಗಳು ಅಳಿವಿನ ಅಂಚಿನಲ್ಲಿವೆ.

ರಾಷ್ಟ್ರೀಯ ಪಕ್ಷಿ ದಿನದ ಮಹತ್ವ

ಪಕ್ಷಿಗಳು ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಅದರಲ್ಲಿ ಪ್ರಮುಖವಾಗಿ ಪರಾಗಸ್ಪರ್ಶ ಮತ್ತು ಬೀಜ ಪ್ರಸರಣದಲ್ಲಿ ಸಹಾಯ ಮಾಡುತ್ತವೆ, ನಮ್ಮ ಭೂಮಿಯನ್ನು ಹಸಿರಾಗಿರಿಸುತ್ತವೆ. ಈ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಪಕ್ಷಿಗಳು ಕೀಟಗಳನ್ನು ತಿನ್ನುವುದರಿಂದ ನಿಸರ್ಗದಲ್ಲಿ ಕೀಟಗಳ ನಿಯಂತ್ರಣ ಮಾಡಲು ಸಹಕಾರಿಯಾಗಿದೆ. ಜೀವವೈವಿಧ್ಯತೆ ಮತ್ತು ಪರಿಸರ ಸ್ಥಿರತೆ ಕಾಪಾಡಲು ಪಕ್ಷಿಗಳ ರಕ್ಷಣಾ ಕಾರ್ಯ ಅತ್ಯಂತ ಪ್ರಮುಖವಾಗಿದೆ ಎಂದು ತಿಳಿಸುವುದು ಈ ದಿನದ ಉದ್ದೇಶ.

ಕೆಲವರು ಮನೆಯಲ್ಲಿ ಪಕ್ಷಿ ಸಾಕಾಣಿಕೆ ಹೆಸರಿನಲ್ಲಿ ಅವುಗಳನ್ನು ಬಂಧನದಲ್ಲಿಟ್ಟು ಹಿಂಸೆ ನೀಡುತ್ತಾರೆ. ಇದನ್ನು ತಡೆಯುವುದು ಹಾಗೂ ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯ ಪಕ್ಷಿ ಪ್ರಭೇದಗಳನ್ನು ಸಂರಕ್ಷಿಸುವಂತೆ ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಪಕ್ಷಿ ದಿನವನ್ನು ಆಚರಣೆ ಮಾಡಲಾಗುತ್ತದೆ.

ಅಳಿವಿನಂಚಿನಲ್ಲಿರುವ ನೈಸರ್ಗಿಕ ಪಕ್ಷಿ ಸಂರಕ್ಷಣಾ ಸ್ಥಳಗಳನ್ನು ರಕ್ಷಿಸುವುದು. ಸಂರಕ್ಷಣಾ ಸಂಸ್ಥೆಗಳನ್ನು ಇನ್ನಷ್ಟು ಬೆಂಬಲಿಸುವುದು ಮತ್ತು ಸುಸ್ಥಿರ ಪರಿಸರ ಪದ್ಧತಿಗಳ ಕುರಿತು ಜಾಗೃತಿ ಮೂಡಿಸುವಂತಹ ಜವಾಬ್ದಾರಿಯುತ ಕ್ರಮಗಳನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಪಕ್ಷಿಗಳು ಎದುರಿಸುತ್ತಿರುವ ಸವಾಲುಗಳು

ಹವಾಮಾನ ವೈಪರೀತ್ಯ: ಪ್ರಸ್ತುತ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ಗಾಳಿಯಲ್ಲಾಗುವ ಬದಲಾವಣೆ, ಕಾಡ್ಗಿಚ್ಚು, ಪ್ರವಾಹ, ಭೂಕಂಪನದಂತಹ ಪ್ರಕೃತಿ ವಿಕೋಪಗಳಿಂದ ಪಕ್ಷಿಗಳು ದಿನೇ ದಿನೇ ಸಮಸ್ಯೆಗಳನ್ನು ಎದುರಿಸುತ್ತಿವೆ. ವಿದ್ಯುತ್ಕಾಂತೀಯ ವಿಕಿರಣಗಳೂ ಪಕ್ಷಿಗಳಿಗೆ ಹಾನಿ ಮಾಡುತ್ತವೆ ಎನ್ನುತ್ತವೆ ಕೆಲವು ವರದಿಗಳು.

ಬೇಟೆ: ಭಾರತದಲ್ಲಿ ಕಠಿಣ ಕಾನೂನು ಕ್ರಮ ರೂಪಿಸಿರುವ ಹೊರತಾಗಿಯೂ, ಮಾನವನ ದುರಾಸೆಯಿಂದಾಗಿ ಕಾಡು ಪ್ರಾಣಿಗಳನ್ನು ಭೇಟೆಯಾಡುವುದರ ಜೊತೆಗೆ ಪಕ್ಷಿಗಳನ್ನು ಸಹ ಭೇಟಿಯಾಡಿ ಆಹಾರಕ್ಕಾಗಿ ಬಳಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಪಕ್ಷಿಗಳು ಅಳಿವಿನಂಚಿಗೆ ತಲುಪಿವೆ.

ವಿಷಪ್ರಾಶನ: ಹಳ್ಳಿ ಭಾಗದಲ್ಲಿ ಬೆಳೆಗಳನ್ನು ತಿಂದು ನಾಶಪಡಿಸುತ್ತವೆ ಎಂಬ ಕಾರಣಕ್ಕೆ ಅವುಗಳಿಗೆ ವಿಷ ಇಡುವಂತಹ ಹೀನ ಕೃತ್ಯ ಎಸಗಲಾಗುತ್ತಿದೆ.

ಆವಾಸಸ್ಥಾನಗಳ ನಾಶ: ನಗರೀಕರಣದ ಪ್ರಭಾವದಿಂದಾಗಿ ಪಕ್ಷಿಗಳು ನೆಲೆನಿಂತಿರುವ ಪ್ರಮುಖ ಆವಾಸ ಸ್ಥಾನಗಳನ್ನು ನಾಶಪಡಿಸುತ್ತಿರುವುದು ಪಕ್ಷಿಗಳ ವಿನಾಶಕ್ಕೆ ಕಾರಣವಾಗಿದೆ.

ಮಾಲಿನ್ಯ: ಪರಿಸರ ಸಂರಕ್ಷಣೆಯ ಉದ್ದೇಶದಿಂದಾಗಿ ಪ್ಲಾಸ್ಟಿಕ್ ಅನ್ನು ನಿಷೇಧ ಮಾಡಿದ್ದರೂ ಕೂಡ ಅದನ್ನು ಯಥೇಚ್ಛವಾಗಿ ಬಳಕೆ ಮಾಡಲಾಗುತ್ತಿದೆ. ಇದು ಪ್ರಾಣಿಗಳು ಹಾಗೂ ಪಕ್ಷಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಟವರ್: ದೇಶ ತಂತ್ರಜ್ಞಾನ ಕ್ಷೇತ್ರದಲ್ಲಿ ದಿನೇ ದಿನೇ ಬೆಳವಣಿಗೆ ಸಾಧಿಸುತ್ತಿದೆ. ಅದಕ್ಕೆ ಇಂಟರ್ನೆಟ್ ಸೌಲಭ್ಯ ಅತ್ಯಂತ ಮುಖ್ಯವಾಗಿದೆ. ಸಂಪರ್ಕ ಸಾಧಿಸುವ ಸಲುವಾಗಿ ಆರಂಭವಾದ ಟವರ್ಗಳು 2ಜಿ, 3ಜಿ, 4ಜಿ ಹಾಗೂ 5ಜಿ ಇಂಟರ್ನೆಟ್ ಸೌಲಭ್ಯ ಒದಗಿಸುವ ಹಂತಕ್ಕೆ ಬಂದು ನಿಂತಿದೆ. ಇಂಟರ್ನೆಟ್ ತರಂಗಾಂತರಗಳಿಂದ ಗುಬ್ಬಚ್ಚಿ ಸೇರಿದಂತೆ ಇತರೆ ಪಕ್ಷಿಗಳ ಮೇಲೆ ಪ್ರಭಾವ ಬೀರುವುದನ್ನು ನೋಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.