ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಗತ್ತಿನ ಅರ್ಧದಷ್ಟು ಸ್ಥಳೀಯ ಭಾಷೆಗಳು ಅಪಾಯದ ಅಂಚಿನಲ್ಲಿವೆ– ವರದಿ

Last Updated 20 ಏಪ್ರಿಲ್ 2023, 7:53 IST
ಅಕ್ಷರ ಗಾತ್ರ

ಜಗತ್ತಿನಲ್ಲಿ 7,000ಕ್ಕೂ ಅಧಿಕ ಭಾಷೆಗಳಿದ್ದು, ಅವುಗಳಲ್ಲಿ ಅರ್ಧದಷ್ಟು ಭಾಷೆಗಳು ಅಳಿವಿನಂಚಿನಲ್ಲಿವೆ ಎಂಬ ಆಘಾತಕಾರಿ ಅಂಶವನ್ನು ‘ದಿ ಕಾನ್ವಸೇಷನ್‘ (the conversation) ನಿಯತಕಾಲಿಕೆಯಲ್ಲಿ ಪ್ರಕಟಗೊಂಡ ಸಂಶೋಧನಾ ವರದಿ ತಿಳಿಸಿದೆ.

ಭಾಷೆ ಭಾಷೆಗಳ ನಡುವೆ ವ್ಯಾಕರಣದಲ್ಲಿ ವೈವಿಧ್ಯತೆಯನ್ನು ಕಾಣಬಹುದು. ಭಾಷೆಯ ನೆರವಿನಿಂದ ಇತಿಹಾಸ ಪ್ರಜ್ಞೆ ಹಾಗೂ ಪರಿಸರದ ಅರಿವು ಪಡೆದುಕೊಳ್ಳುವುದರಿಂದ ಮನುಷ್ಯನಾಗಿ ಬದುಕಲು ಸಹಕಾರಿಯಾಗಿದೆ. ಇದೇ ಅಂಶವನ್ನು ಇಟ್ಟುಕೊಂಡು ಭಾಷಾತ್ಞರು ಸಂಶೋಧನಾ ವರದಿ ಪ್ರಕಟಿಸಿದ್ದಾರೆ.

ಈ ಸಂಶೋಧನೆಯಲ್ಲಿ ತಿಳಿದುಬಂದ ಆತಂಕಕಾರಿ ಅಂಶವೆಂದರೆ ಪ್ರಪಂಚದಲ್ಲಿರುವ ಒಟ್ಟು ಭಾಷೆಗಳಲ್ಲಿ ಅರ್ಧದಷ್ಟು ಭಾಷೆಗಳು ತಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳತ್ತಿದೆ.

ವ್ಯಾಕರಣಗಳು ಭಾಷೆಗಳಿಗೆ ಗಟ್ಟಿತನವನ್ನು ಕೊಡುತ್ತದೆ. ಆದರೆ, ಇಂದು ಆಯಾಯ ಭಾಷೆಯ ವ್ಯಾಕರಣದ ವೈವಿಧ್ಯತೆಗೆ ಧಕ್ಕೆ ಉಂಟಾಗುತ್ತಿದೆ.

ಪ್ರಪಂಚದಲ್ಲಿನ ಭಾಷೆಗಳ ವ್ಯಾಕರಣವನ್ನು ನೋಡಿದರೆ, ಅನೇಕ ವಿವಿಧತೆಗಳು ಕಂಡುಬರುತ್ತದೆ. ಇದಕ್ಕೆಲ್ಲಾ ಕಾಲದಿಂದ ಕಾಲಕ್ಕೆ ಬದಲಾಗುವ ಮನುಷ್ಯನ ಜಾಣ್ಮೆಯೇ ಕಾರಣ ಎಂದಿದೆ ವರದಿ.

ಒಂದೇ ಪರಿಸರದಲ್ಲಿ ಮಾತನಾಡುವ ನಿರ್ದಿಷ್ಟ ಭಾಷೆಯನ್ನು ತೆಗೆದುಕೊಂಡರೆ, ಆ ಪರಿಸರದ ಕೆಲವು ಭಾಗಗಳಲ್ಲಿ ಆ ಭಾಷೆ ಹುಲುಸಾಗಿದ್ದು, ಉಳಿದ ಕಡೆ ಅದರ ಬೆಳವಣಿಗೆಯು ಕುಂಠಿತಗೊಂಡಿರುತ್ತದೆ. ಭಾಷೆಯನ್ನು ಬಳಸುವ ಪ್ರಮಾಣದಿಂದ ಪ್ರದೇಶದ ವೈವಿಧ್ಯತೆಯೂ ಬದಲಾಗುತ್ತದೆ ಎಂದು ಉಲ್ಲೇಖಿಸಿದೆ.

ಇತರ ದೇಶಗಳಿಗೆ ಹೋಲಿಸಿದರೆ ದಕ್ಷಿಣ ಅಮೇರಿಕಾ ಮತ್ತು ಆಸ್ಟ್ರೇಲಿಯಾದಂಥ ದೇಶಗಳಲ್ಲಿ ಎಲ್ಲಾ ಸ್ಥಳೀಯ ಭಾಷೆಗಳು ತನ್ನ ವೈವಿಧ್ಯತೆಯನ್ನು ಕಳೆದುಕೊಳ್ಳುವ ಸ್ಥಿತಿ ತಲುಪಿವೆ. ಅಲ್ಲಿನ ಎಲ್ಲಾ ಸ್ಥಳೀಯ ಭಾಷೆಗಳು ಅಪಾಯದಲ್ಲಿವೆ ಎಂದು ವರದಿ ತಿಳಿಸುತ್ತದೆ.

ಪೆಸಿಫಿಕ್, ಆಗ್ನೇಯ ಏಷ್ಯಾ ಮತ್ತು ಯುರೋಪ್‌ನಲ್ಲಿರುವ ಭಾಷೆಗಳು ಪ್ರಪಂಚದ ಇತರ ಭಾಗಕ್ಕೆ ಹೋಲಿಸಿದರೆ ಸುರಕ್ಷಿತವಾಗಿರುವ ಆದರೂ ಇಲ್ಲಿ ಸ್ಥಳೀಯ ಭಾಷೆಯ ಬಳಕೆಯಲ್ಲಿ ಶೇ 25 ರಷ್ಟು ನಾಟಕೀಯ ಇಳಿಕೆ ಕಂಡುಬರುತ್ತಿದೆ ಎಂದಿದೆ.

ವಿಶ್ವಸಂಸ್ಥೆಯು 2022–32ರ ವರೆಗೆ ಸ್ಥಳೀಯ ಭಾಷೆಗಳ ದಶಕ ಎಂದು ಘೋಷಿಸಿದ್ದು, ಸ್ಥಳೀಯ ಸಾಂಸ್ಕೃತಿಕ ಕೇಂದ್ರಗಳ ಮೂಲಕ ಭಾಷೆಯ ಬೆಳವಣಿಗೆಯನ್ನು ಉತ್ತೇಜಿಸಬೇಕೆಂದು ಕರೆಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT