ಅದೊಂದು ಕಾಲವಿತ್ತು, ಒಬ್ಬನೇ ಹದಿನೆಂಟು ಬಾಟಲಿ ಬಿಯರ್ಗಳನ್ನು ಕುಡಿಯುತ್ತಿದ್ದೆ. ಮತ್ತೆ ಒಂದಿನ ಅನಿಸ್ತು, ಇದೇನಿದು, ಹೊಟ್ಟೆಯುಬ್ಬಿಸುವ ಕೆಲಸ ಮಾಡುತ್ತಿರುವೆ ಎಂದೆನಿಸಿದ್ದೇ ಬಿಯರ್ ಬಿಟ್ಟು ರಮ್ ಕುಡಿಯಲಾರಂಭಿಸಿದೆ

ಹೀಗೆ ತಮ್ಮ ಕುಡಿತದ ಚಟವನ್ನು ಬಿಚ್ಚಿಟ್ಟವರು ಸಾಹಿತಿ, ಗೀತರಚನೆಕಾರ ಜಾವೇದ್ ಅಖ್ತರ್. ದಿನಪತ್ರಿಕೆ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಯೌವ್ವನದ ದಿನಗಳನ್ನು ನೆನಪಿಸಿಕೊಂಡು, ಚಟವಾದ ಬಗೆಯನ್ನು ಹೇಳಿಕೊಂಡಿದ್ದಾರೆ.

ಮೊದಲು ವಿಸ್ಕಿ ಕುಡಿಯುತ್ತಿದ್ದೆ. ದಿನಕ್ಕೆ ಒಂದು ಬಾಟಲಿಯಾದರೂ ಸರಿ, ಮುಗಿಸುತ್ತಿದ್ದೆ. ಸ್ನೇಹಿತರ ಸಾಂಗತ್ಯ ಬೇಕು ಅಂತೇನೂ ಇರಲಿಲ್ಲ. ಕುಡಿಯಲಾರಂಭಿಸಿದರೆ ಮುಗೀತು. ಹತ್ತೊಂಬತ್ತನೆಯ ವಯಸ್ಸಿಗೆ ಒಪದವಿ ಮುಗಿಸಿ ಮುಂಬೈಗೆ ಬಂದಾಗಲೇ ಕುಡಿತದ ಚಟ ಅಂಟಿಕೊಂಡಿದ್ದು. ವಿಸ್ಕಿ ಆರೋಗ್ಯಕ್ಕೆ ಹಾನಿಕರ ಎನಿಸಿದಾಗ ಬಿಯರ್ ಕುಡಿಯಲಾರಂಭಿಸಿದೆ. ಅದೂ ಮಿತಿಮೀರಿತು. ಎಲ್ಲೆ ಮೀರಿ ಕುಡಿದಿದ್ದೂ ಇದೆ. ಆಮೇಲೆ ಅದನ್ನೂ ನಿಲ್ಲಿಸಿ, ಇದೀಗ ಪ್ರತಿದಿನ ಚೂರು ರಮ್ ಸೇವಿಸುತ್ತಿರುವೆ.

ಕುಡಿತ ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದೆ. ಗೊತ್ತಿದ್ದೂ ಚಟ ಅಂಟಿಕೊಂಡರೆ ಏನು ಮಾಡುವುದು ಎಂದೂ ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.