ಅಡುಗೆ ಕೆಲಸ ಹೇಳಿದಷ್ಟು ಸುಲಭವಲ್ಲ. ಅದಕ್ಕೆ ಅದರದ್ದೇ ಆದ ನಿಯಮಗಳಿವೆ. ಒಂದು ಪದಾರ್ಥ ಹೆಚ್ಚಾದರೂ ಅಡುಗೆ ಹಾಳಾಗುತ್ತದೆ. ಹೀಗಾಗಿ ಬಾಣಸಿಗರ ಕೆಲಸ ಸುಲಭವಲ್ಲ. ಬಾಣಸಿಗರು ಸಾವಿರಾರು ಮಂದಿಗೆ ಅಚ್ಚುಕಟ್ಟಾಗಿ ರುಚಿಕರವಾದ ಅಡುಗೆ ತಯಾರಿಸುತ್ತಾರೆ. ಅವರ ಕೈಚಳಕಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ 20ರಂದು ‘ಅಂತರರಾಷ್ಟ್ರೀಯ ಬಾಣಸಿಗರ ದಿನ’ ಆಚರಿಸಲಾಗುತ್ತದೆ.
.World Food Day: ಈ ವರ್ಷದ ಥೀಮ್ ಏನು? ಆಚರಣೆಯ ಉದ್ದೇಶವೇನು?.
ಇತಿಹಾಸ ಏನು?

ಅಂತರರಾಷ್ಟ್ರೀಯ ಬಾಣಸಿಗರ ದಿನವನ್ನು 2004ರಲ್ಲಿ ವಿಶ್ವ ಬಾಣಸಿಗರ ಸಂಘದ ಅಧ್ಯಕ್ಷರಾಗಿದ್ದ, ಪ್ರಖ್ಯಾತ ಬಾಣಸಿಗ ಡಾ. ಬಿಲ್ ಗಲ್ಲಾಘರ್ ಅವರು ಆರಂಭಿಸಿದರು. ಬಳಿಕ ಪ್ರತಿ ವರ್ಷ ಅ.20 ರಂದು ಬಾಣಸಿಗರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಬಾಣಸಿಗರ ದಿನದ ಆಚರಣೆಯ ಹಿಂದಿನ ಉದ್ದೇಶವೇನು?

ಬಾಣಸಿಗರ ವೃತ್ತಿಯನ್ನು ಗೌರವಿಸುವುದು. ಅವರುಗಳ ಕಠಿಣ ಪರಿಶ್ರಮ ಮತ್ತು ಸೃಜನಶೀಲತೆಯನ್ನು ಗುರುತಿಸುವುದಕ್ಕಾಗಿ ವಿಶ್ವ ಬಾಣಸಿಗರ ದಿನ ಆಚರಿಸಲಾಗುತ್ತದೆ. ಇದರ ಜೊತೆಗೆ ಪಾಕಶಾಲೆಯ ಕೌಶಲ್ಯಗಳನ್ನು ಮುಂದಿನ ಪೀಳಿಗೆಗೆ ಕಲಿಸಿಕೊಡುವ ಉದ್ದೇಶವನ್ನೂ ಹೊಂದಿದೆ.

ಈ ವರ್ಷದ ಪರಿಕಲ್ಪನೆ ಏನು?

ಮಕ್ಕಳನ್ನು ಪಾಕಶಾಲೆಯ ಸಾಹಸಕ್ಕೆ ಪ್ರೋತ್ಸಾಹಿಸುವುದು.

ಬಾಣಸಿಗರು ತಮ್ಮ ಸೃಜನಶೀಲತೆ ಹಾಗೂ ಕೌಶಲ್ಯದಿಂದ ರುಚಿಯಾದ ಭಕ್ಷ್ಯ ಭೋಜನಗಳನ್ನು ತಯಾರು ಮಾಡುತ್ತಾರೆ. ಈ ದಿನ ಆಹಾರ ಮೌಲ್ಯ ಹಾಗೂ ಆರೋಗ್ಯಕರ ಆಹಾರ ಪದ್ಧತಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ದಿನವೂ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.