ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಮಾನ...ಗೆಲುವಿಗೆ ಸೋಪಾನ

Last Updated 12 ಜುಲೈ 2011, 19:30 IST
ಅಕ್ಷರ ಗಾತ್ರ

ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಒಮ್ಮೆಯಾದರೂ ತೀಕ್ಷ್ಣವಾದ ಅವಮಾನ ಆಗಲೇಬೇಕು. ಅದು ಆತನ ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆ. ಅವಮಾನವನ್ನು ಸವಾಲಾಗಿ ಸ್ವೀಕರಿಸಿ, ಸಾಧನೆಗೆ ಚೋದಕ ಶಕ್ತಿಯಾಗಿ ಬಳಸಿದವರು ಯಶಸ್ಸಿನ ಮೆಟ್ಟಿಲೇರುತ್ತಾರೆ.

ವಾಹನದ ಗಾಲಿಗೆ ನೆಲದೊಂದಿಗಿನ ಘರ್ಷಣೆಯೇ ಮುನ್ನಡೆಯಲು ಪೂರಕವಾಗುತ್ತದೆ. ನಮ್ಮ ಜೀವನ ಚಕ್ರವೂ ಹೀಗೆಯೇ. ಅವಮಾನ, ಇತರರ ತಿರಸ್ಕಾರ, ಕಿರುಕುಳ ದೌರ್ಜನ್ಯಗಳು ಗುರಿತಲುಪಲು ಚಾಲನಾ ಶಕ್ತಿಯಾಗುತ್ತದೆ. ಅದನ್ನು ಆ ರೀತಿ ಉಪಯೋಗಿಸಿಕೊಳ್ಳುವ ಮನಃಶಕ್ತಿ ನಮ್ಮಲ್ಲಿ ಇರಬೇಕು.
 
ಅವಮಾನ ಉಂಟಾದಾಗ ಕುಗ್ಗಿ ಹೋಗದೇ, ಅದನ್ನೇ ಸಾಧನೆಗೆ ಸೋಪಾನವಾಗಿಸುವ ಇಚ್ಛಾಶಕ್ತಿ ನಮ್ಮಲ್ಲಿ ಇರಬೇಕು. ಇಂಥ ಸವಾಲು ಎಲ್ಲರ ಜೀವನದಲ್ಲಿ ಕೆಲವೊಮ್ಮೆಯಾದರೂ ಸಂಭವಿಸಿರುತ್ತವೆ.ಇದು  ಯುವಜನತೆಗೂ ಚಿಂತನೆಗೆ ಯೋಗ್ಯ ವಿಷಯ. ನಮ್ಮ, ಇತಿಹಾಸಗಳಿಂದಲೂ ಇಂತಹ ಮಾದರಿ ವ್ಯಕ್ತಿಗಳು ಕಾಣಸಿಗುತ್ತಾರೆ.

ಎ.ಪಿ.ಜೆ ಅಬ್ದುಲ್ ಕಲಾಂ ಆದರ್ಶ ಜೀವನ ನಮೆ ಸಾಕಲ್ವ? ಚಾಣಕ್ಯನಿಗೆ ನಂದ ದೊರೆಯಿಂದಾದ ಅವಮಾನೇ ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ಕಾರಣವಾದ ಕೆಚ್ಚು ಮನದಲ್ಲಿ ಮೂಡಲು ಕಾರಣವಾಯಿತು.

ಗಾಂಧೀಜಿ ಅವರನ್ನು ದಕ್ಷಿಣ ಆಫ್ರಿಕಾದ ರೈಲ್ವೆ ಬೋಗಿಯಿಂದ `ಕರಿಯ~ನೆಂದು ನಿಂದಿಸಿ ಹೊರದಬ್ಬಿದ್ದು, ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು  `ದಲಿತ ಹುಡುಗ~ ಎಂದು ಗೊತ್ತಾದ ತಕ್ಷಣ ಎತ್ತಿನ ಬಂಡಿಯಿಂದ ಕೆಳಕ್ಕೆ ನೂಕಿದ್ದು, ಇತಿಹಾಸದಲ್ಲಿ ಹೊಸ ಕ್ರಾಂತಿಗೆ ಕಾರಣವಾಯಿತು.

ಅವರ ಮನಕಲಕಿದ ಅವಮಾನ ಮನುಕುಲಕ್ಕೆ ಉಪಕಾರಿಯಾಗುವಂತಹ ಬದಲಾವಣೆಯನ್ನು ತರಲು ಅವರಿಗೆ ಸಾಧ್ಯವಾಯಿತು.   ಆದರೆ, ನಮ್ಮ ಯುವ ಜನೆ,  ಓದು, ಬಡತನ, ಪ್ರೀತಿ  ಈ ವಿಷಯಗಳಲ್ಲಿ ಒಂದು ಸಣ್ಣ ಸೋಲಾದರೆ ಅದು ತಮ್ಮ ಜೀವನದ ಅಂತಿಮ... ಎನ್ನುವಂತಹ ದುರ್ಬಲ ಮನಸ್ಸು  ಹೊಂದುತ್ತಿದ್ದಾರೆ.

ಸೋಲನ್ನು, ಅವಮಾನವನ್ನು, ದೌರ್ಜನ್ಯ ಹೀಯಾಳಿಕೆಯನ್ನೇ ಸವಾಲಾಗಿ ಸ್ವೀಕರಿಸಿ ಮುನ್ನಡೆಯುವ ಗಟ್ಟಿಮನಸ್ಸು ನಮ್ಮಲ್ಲಿ ಮೂಡಬೇಕಾಗಿದೆ. ಸವಾಲುಗಳು ಎದುರಾದಾಗ ಕುಸಿದು ಕೂರದೇ, ಆತ್ಮಹತ್ಯೆ, ಸಮಾಜಕಂಟಕ ದಾರಿ ತುಳಿಯದೇ ತಮಗಾದ ಹಿಂಸೆಯ ಮೂಲವನ್ನೇ ಕಿತ್ತೊಗೆಯುವ ಶಪಥ ತೊಟ್ಟು ಗುರಿಯತ್ತ ಹೆಜ್ಜೆ ಇರಿಸಬೇಕಿದೆ.

`ನೆದವೆಡವದೇ, ಕುಳಿತವರೆಡವುವೇ?~ ಅರ್ಥಗರ್ಭಿತ ವಾದ ಸಾಲುಗಳು. ಹೆಚ್ಚು ಸಾಧಿಸೇಕಾದವರು ಹೆಚ್ಚು ಹೆಚ್ಚು ಅವಮಾನಗಳನ್ನು ಸಹಿಸುವುದು ಅಥವಾ ಎದುರಿಸುವುದು ನಿಸರ್ಗ ನಿಯಮವೇನೋ?... ಆದೆ, ಗಮನಿಸಬೇಕಾದ ಸಂಗತಿ ಎಂದರೆ ಶ್ರೇಷ್ಠ ವ್ಯಕ್ತಿಗಳು ಇಂತಹ ಅವಮಾನಗಳನ್ನು ಮರೆಯಲು ಒಂದೊಂದು ಅವಕಾಶ ಬಳಸಿಕೊಂಡೆ, ಸಾಮಾನ್ಯರು ಚಿಕ್ಕ ಚಿಕ್ಕ ಅವಮಾನಗಳಿಂದಲೂ ಕುಗ್ಗಿ ಹೋಗುತ್ತಾರೆ. ಒಮ್ಮೆ ಯೋಚಿಸಿ ನೋಡಿ, ಜಗತ್ತಿನ ಎಲ್ಲ ಶ್ರೇಷ್ಠ ವ್ಯಕ್ತಿಗಳೆಲ್ಲ ಆರೋಪ, ಅವಮಾನಗಳನ್ನು ಎದುರಿಸಿದವೇ...!

ಗುರಿಯೆಂಬ ದಾರಿಯಲ್ಲಿ ಸಾಗುವಾಗ ಏನೆಲ್ಲಾ ಕಾಣುತ್ತೇವೆ.. ತುಳಿಯುತ್ತೇವೆ... ಹಾಕುವ ಹೆಜ್ಜೆ ಎಷ್ಟೇ ಕಷ್ಟಕರವಾದರೂ ಹಿಂದೆ ನೋಡದೆ  ಮೌನದಿಂದ ನಮ್ಮ ಸಾಧನೆಯತ್ತ ಸಾಗಿದ್ದರೆ ಗೆಲುವು ಖಂಡಿತ. ನಮ್ಮ ಆದರ್ಶ ವ್ಯಕ್ತಿಗಳು ಸಾಗಿದ ದಾರಿ ಗಮನಿಸಿ.
 
ಅವರ ಯಶಸ್ಸು ಕಂಡು ನಾವೂ ಅವರಂತೆಯೇ ಆಗಲು ಸಾಧ್ಯವಿಲ್ಲವೇ ಎಂದು ಒಂದು ಕ್ಷಣವೂ ಯೋಚನೆಯನ್ನು ಕೂಡ ಮಾಡದೆ ನಾವು ದುಡುಕುತ್ತೇವೆ. ಬಾಳೆಂಬ ಸುಮಧುರ ಗಿಡದಲ್ಲಿ ಹೂ ಅರಳುವುದನ್ನು ಕಾಣದೆ ಮುಳ್ಳು ಎಲ್ಲೆಲ್ಲೂ ಇದೆ ಎಂದು ಕಲ್ಪಿಸಿಕೊಂಡು ನರಳುತ್ತೇವೆ. ಯುವಜನರಾದ ನಾವು ಈ ನಿಟ್ಟಿನಲ್ಲಿ ಚಿಂತಿಸಬೇಕಿದೆ.

ಯಾವುದೇ ವಸ್ತು ಅಥವಾ ವ್ಯಕ್ತಿ ಪರಿಪೂರ್ಣ ಆಗಿರಲು ಸಾಧ್ಯವಿಲ್ಲ. ಸಕಲ ಜೀವರಾಶಿಗಳ ಅಸ್ತಿತ್ವಕ್ಕೆ ಕಾರಣವಾಗಿರುವ ಭೂಮಿ, ಜಲದಲ್ಲಿಯೂ ಕೂಡ ಕಲ್ಮಶಗಳಿವೆ.  ಇನ್ನು ಭಾವನೆಗಳಿಂದ ಪ್ರೇರಿತವಾಗುವ ಮನುಷ್ಯನ ವರ್ತನೆಯಲ್ಲಿ ಅಷ್ಟಿಷ್ಟು ತಪ್ಪುಗಳಾಗುವುದು ಸಹಜ.

ಶ್ರೇಷ್ಠ ವ್ಯಕ್ತಿಗಳು ತಾವು ಮಾಡುವ ತಪ್ಪುಗಳಿಂದ, ಅದರಿಂದ ಉಂಟಾಗುವ ಅವಮಾನಗಳಿಂದ ಪಾಠ ಕಲಿಯುತ್ತ ಪರಿಪೂರ್ಣೆಯತ್ತ ಸಾಗುತ್ತಾರೆ. ಸಾಮಾನ್ಯರು ತಪ್ಪುಗಳನ್ನು ಪುನರಾವರ್ತಿಸುತ್ತಾ ಹೋಗುತ್ತಾರೆ. ಬದುಕನ್ನು ದುರ್ಭರವಾಗಿಸುತ್ತಾರೆ. ಸಾಧಕರ ದಾರಿಯನ್ನು ನಾವು ಆರಿಸೋಣ, ಸಾಮಾನ್ಯರಂತಾಗದಿರೋಣ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT