ಈ ಘಟನೆ ನಡೆದದ್ದು 1895ರಲ್ಲಿ ಲಂಡನ್ನಲ್ಲಿ. ಸಾರ್ವಜನಿಕ ಭಾಷಣ ಮಾಡಬೇಕಿದ್ದ ಸ್ವಾಮಿ ವಿವೇಕಾನಂದರು, ಸ್ವಾಮಿ ಶಾರದಾನಂದರ ಒಟ್ಟಿಗೆ ಅಲ್ಲಿಗೆ ಬಂದಿದ್ದರು. ಎದ್ದು ನಿಂತು ಮಾತನಾಡಬೇಕಾದ ಸಮಯ ಬಂದಾಗ ವಿವೇಕಾನಂದರು, ತಮ್ಮ ಬದಲಿಗೆ ಸ್ವಾಮಿ ಶಾರದಾನಂದರು ಉಪನ್ಯಾಸ ನೀಡಲಿದ್ದಾರೆ ಎಂದು ಇದ್ದಕ್ಕಿದ್ದಂತೆಯೇ ಘೋಷಿಸಿಬಿಟ್ಟರು.

ಇದರಿಂದ ಶಾರದಾನಂದರು ಅಚ್ಚರಿಗೆ ಒಳಗಾದರಾದರೂ ಅಂದು ಅವರು ಶ್ರೇಷ್ಠ ಉಪನ್ಯಾಸ ನೀಡಿದರಲ್ಲದೆ, ಆ ನಂತರವೂ ಅದನ್ನು ಮುಂದುವರಿಸಿದರು.

ಸ್ವಾಮಿ ಶಾರದಾನಂದರಿಗೆ ಬೇಕಾಗಿದ್ದುದು ಅವರ ಆತ್ಮವಿಶ್ವಾಸಕ್ಕೆ ಸ್ವಲ್ಪ ಮಟ್ಟಿನ ಒತ್ತಾಸೆ ಮಾತ್ರ ಎಂಬುದನ್ನು ವಿವೇಕಾನಂದರು ಅರಿತಿದ್ದರು. ಇದನ್ನು ಒಂದು ಬಿಡಿ ಘಟನೆಯನ್ನಾಗಿ ನೋಡಿದರೆ ನಮಗೆ ಹೆಚ್ಚೇನೂ ತಿಳಿದುಬರುವುದಿಲ್ಲ. ಆದರೆ ಸ್ವಾಮಿ ವಿವೇಕಾನಂದರ ನಾಯಕತ್ವ ಗುಣ ಮತ್ತು ನಿರ್ವಹಣಾ ಶೈಲಿಯ ದೃಷ್ಟಿಕೋನದಿಂದ ಇದನ್ನು ನಾವು ನೋಡಬೇಕಾಗುತ್ತದೆ.

ಸ್ವಾಮೀಜಿ ಕೇವಲ ಸ್ಫೂರ್ತಿದಾಯಕ ನಾಯಕರಷ್ಟೇ ಆಗಿರಲಿಲ್ಲ, ಸಾಕಷ್ಟು ವಾಸ್ತವ ಪ್ರಜ್ಞೆ ಉಳ್ಳವರೂ ಆಗಿದ್ದರು. `ಸೇವಕ ಗುಣದ ನಾಯಕತ್ವ~ದಲ್ಲಿ ನಂಬಿಕೆ ಹೊಂದಿದ್ದುದರ ಜೊತೆಗೆ ತಮ್ಮ ಸುತ್ತಮುತ್ತ ಇರುವವರನ್ನು ಸಬಲೀಕರಿಸಲೂ ಅವಿರತವಾಗಿ ಶ್ರಮಿಸುತ್ತಿದ್ದರು.

ತಮ್ಮ ಸಹ ಶಿಷ್ಯರು ಮತ್ತು ಅನುಯಾಯಿಗಳನ್ನು ನಿರ್ವಹಿಸುವಾಗ ಈಗಿನ ಆಡಳಿತ ನಿರ್ವಹಣಾ ಕ್ಷೇತ್ರದಲ್ಲಿ ಇಂದು ಹೆಸರಾಗಿರುವ `ಪಿಗ್ಮೇಲಿಯನ್ ಪರಿಣಾಮ~ವನ್ನು ಅವರು ಆಗಲೇ ಅಳವಡಿಸಿಕೊಂಡಿದ್ದರು.

ಆಡಳಿತ ನಿರ್ವಹಣಾ ತಜ್ಞ ಜೆ.ಸ್ಟರ್ಲಿಂಗ್ ಲಿವಿಂಗ್ಸ್ಟನ್ ಅವರ ಪ್ರಕಾರ ಈ ಸಿದ್ಧಾಂತವೆಂದರೆ, ತಮ್ಮ ಅಧೀನದಲ್ಲಿರುವವರನ್ನು ನಾಯಕನ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸಲು ಅವಕಾಶ ಕಲ್ಪಿಸುವುದೇ ಆಗಿದೆ.

ಸ್ವಾಮಿ ವಿವೇಕಾನಂದರು ತಮ್ಮ ಅನುಯಾಯಿಗಳ ಬಗ್ಗೆ ಉನ್ನತ ನಿರೀಕ್ಷೆ ಇಟ್ಟುಕೊಂಡಿದ್ದರು ಮತ್ತು ಅದನ್ನು ಅವರಿಗೆ ಸ್ಪಷ್ಟವಾಗಿ ಮನದಟ್ಟು ಮಾಡಿಕೊಟ್ಟಿದ್ದರು. ಈ ಮೂಲಕ ಒಂದು ಅತ್ಯುತ್ತಮವಾದ ಕಾರ್ಯನಿರ್ವಹಣೆಗೆ ಅವರನ್ನು ಪ್ರೇರೇಪಿಸಿದ್ದರು.

ನಾಯಕರಾದವರು ತಮ್ಮ ಅನುಯಾಯಿಗಳಲ್ಲಿ ವಿಶ್ವಾಸ ಇಟ್ಟು ಅವರನ್ನು ಸಬಲೀಕರಣಗೊಳಿಸುತ್ತಾರೆ. ಇದರ ಪರಿಣಾಮವಾಗಿ ಶಿಷ್ಯರು ಶ್ರೇಷ್ಠರಾಗುತ್ತಾರೆ. ನಾಯಕರು ಇತರರನ್ನು ಬೆಳೆಸುವ ಮೂಲಕ ತಾವು ಸಹ ಇನ್ನಷ್ಟು ಉನ್ನತ ಮಟ್ಟಕ್ಕೆ ಏರುತ್ತಾರೆ.

ತನ್ನ ಸುತ್ತಲಿನ ಜನರನ್ನು ಪರಾವಲಂಬನೆಯಿಂದ ಸ್ವಾವಲಂಬನೆಯೆಡೆಗೆ ಕೊಂಡೊಯ್ಯುವುದು ಹಾಗೂ ನಂತರ ಪರಸ್ಪರ ಅವಲಂಬನೆಯೆಡೆಗೆ ಪ್ರೇರೇಪಿಸುವುದು ನಾಯಕನ ನಿರಂತರ ಗುರಿಯಾಗಿರುತ್ತದೆ.

ಸ್ವಾಮಿ ವಿವೇಕಾನಂದರು ಈಗಿನ ಆಧುನಿಕ ಆಡಳಿತ ನಿರ್ವಹಣೆ ಮನವರಿಕೆ ಮಾಡಿಕೊಳ್ಳುವುದಕ್ಕೆ ಎಷ್ಟೋ ಮೊದಲೇ `ನಿರ್ದೇಶನ ಮತ್ತು ನಿಯಂತ್ರಣ~ಕ್ಕಿಂತ `ಸಬಲೀಕರಣ ಹಾಗೂ ಒತ್ತಾಸೆ~ ಧೋರಣೆಯೇ ಪರಿಣಾಮಕಾರಿ ಎಂಬುದನ್ನು ಅರಿತಿದ್ದರು. ಯಾವುದೇ ಪ್ರಕ್ರಿಯೆಯಲ್ಲಿ ವಿಶ್ವಾಸ ಬಹು ಮುಖ್ಯ ಪಾತ್ರ ವಹಿಸುತ್ತದೆ.

ಒಂದು ವೇಳೆ ನಾಯಕನಿಗೆ ತನ್ನ ಅನುಯಾಯಿಗಳ ಬಗ್ಗೆ ವಿಶ್ವಾಸ ಇಲ್ಲದಿದ್ದಾಗ ಆತ ಸಬಲೀಕರಣಕ್ಕೆ ಬದಲಾಗಿ ನಿಯಂತ್ರಣದ ಮಾರ್ಗ ಚಲಾಯಿಸಲು ಮುಂದಾಗುತ್ತಾನೆ. ವಿವೇಕಾನಂದರು ತಮ್ಮ ಶಿಷ್ಯವೃಂದವನ್ನು ಉನ್ನತ ಕಾರ್ಯಗಳಲ್ಲಿ ತೊಡಗಿಸುತ್ತಿದ್ದಾಗ ಅವರ ಸಾಮರ್ಥ್ಯದ ಮೇಲೆ ಸಂಪೂರ್ಣ ವಿಶ್ವಾಸವನ್ನು ಹೊಂದಿರುತ್ತಿದ್ದರು.

ತಮ್ಮ ಸುತ್ತಲಿನವರನ್ನು ಉನ್ನತ ಕಾರ್ಯಸಾಧನೆಗೆ ಉತ್ತೇಜಿಸುವ ಸ್ವಾಮೀಜಿಯ ತುಡಿತ ಎಷ್ಟು ತೀವ್ರವಾಗಿತ್ತು ಎಂಬುದಕ್ಕೆ ಅವರು ತಮ್ಮ ಶಿಷ್ಯ ಸ್ವಾಮಿ ಶುದ್ಧಾನಂದರಿಗೆ 1897ರಲ್ಲಿ ಬರೆದಿರುವ ಪತ್ರವೇ ನಿದರ್ಶನವಾಗಿದೆ.

`ನನ್ನ ಸಹ ಶಿಷ್ಯರಿಗಿಂತ ಹೆಚ್ಚಿನದನ್ನು ನಾನು ನನ್ನ ಬಾಲ ಶಿಷ್ಯರಿಂದ ನಿರೀಕ್ಷಿಸುತ್ತೇನೆ ಎಂಬುದನ್ನು ನೀನು ನೆನಪಿನಲ್ಲಿಡು. ನನ್ನ ಪ್ರತಿ ಬಾಲ ಶಿಷ್ಯನೂ ನನಗಿಂತ ನೂರು ಪಟ್ಟು ಹೆಚ್ಚು ಶ್ರೇಷ್ಠನಾಗಬೇಕೆಂದು ನಾನು ಬಯಸುತ್ತೇನೆ. ನೀವು ಪ್ರತಿಯೊಬ್ಬರೂ ಬೃಹತ್ತಾಗಿ ಬೆಳೆಯಲೇಬೇಕು. ಇದು ಕಡ್ಡಾಯ. ವಿಧೇಯತೆ, ಸದಾ ಸಿದ್ಧವಾಗಿರುವಿಕೆ ಮತ್ತು ಮಾಡುವ ಕಾರ್ಯದ ಮೇಲೆ ಪ್ರೀತಿ- ಈ ಮೂರೂ ನಿನ್ನಲ್ಲಿದ್ದರೆ ಯಾವುದೂ ನಿನ್ನನ್ನು ತಡೆಯಲು ಸಾಧ್ಯವಿಲ್ಲ~ ಎಂಬ ಒಕ್ಕಣೆ ಅವರ ಪತ್ರದಲ್ಲಿದೆ.

ಇದು ಜನರನ್ನು ಉತ್ತೇಜಿಸಿ ಸಬಲಗೊಳಿಸುವ ವಿವೇಕಾನಂದರ ಕೌಶಲ್ಯ ಮತ್ತು ಸಾಮರ್ಥ್ಯವನ್ನು ತೋರಿಸುತ್ತದೆ. `ಏಳಿ ಎದ್ದೇಳಿ ಗುರಿ ಮುಟ್ಟುವತನಕ ನಿಲ್ಲದಿರಿ~ ಎಂಬ ಅವರ ಸಂದೇಶ ಕೂಡ ಜನರನ್ನು ಸಾಮೂಹಿಕವಾಗಿ ಸಬಲಗೊಳಿಸುವ ಉಕ್ತಿ ಎಂದೇ ನಾವು ಅರ್ಥೈಸಿಕೊಳ್ಳಬಹುದು.

ಜೆ.ಕಾರ್ಲಾ ನಾರ್ಟ್ಕಟ್ ಹೀಗೆ ಹೇಳಿದ್ದರು `ಬಹುತೇಕ ನಾಯಕರ ಗುರಿ ಜನ ತಮ್ಮ ಬಗ್ಗೆ ಹೆಚ್ಚು ಚಿಂತಿಸುವಂತೆ ಮಾಡುವುದೇ ಆಗಿರುತ್ತದೆ. ಆದರೆ ಒಬ್ಬ ಉನ್ನತ ನಾಯಕನ ಗುರಿ ಏನಿದ್ದರೂ ಜನ ತಮ್ಮ ಬಗ್ಗೆ ತಾವು ಹೆಚ್ಚು ಸ್ವಾಭಿಮಾನದಿಂದ ಚಿಂತಿಸುವಂತೆ ಮಾಡುವ ಧ್ಯೇಯ ಹೊಂದಿರುತ್ತದೆ~

ನಮ್ಮ ಕಾಲದ ಉತ್ಕೃಷ್ಟ ನಾಯಕರಾದ ವಿವೇಕಾನಂದರಿಗೆ ನಾಯಕತ್ವದ ಈ ವ್ಯಾಖ್ಯೆ ಅತ್ಯಂತ ಸೂಕ್ತವಾಗಿ ಅನ್ವಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.