ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್‌

Last Updated 6 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

1. ಚಹಾ ಸೇವನೆ ಮೊತ್ತ ಮೊದಲಿಗೆ ಆರಂಭವಾದದ್ದು ಯಾವ ದೇಶದಲ್ಲಿ?

ಅ) ಭಾರತ ಆ) ಚೀನಾ
ಇ) ಅಮೆರಿಕ ಈ) ಇಂಗ್ಲೆಂಡ್

2. ನಿಘಂಟುಕಾರರಾಗಿದ್ದ ಫರ್ಡಿನಾಂಡ್ ಕಿಟೆಲ್ ಯಾವ ಸಂಸ್ಥೆಯ ಮಿಷನರಿಯಾಗಿದ್ದರು?

ಅ) ಬಾಸೆಲ್ ಮಿಷನ್ ಆ) ವೆಸ್ಲಿಯನ್ ಮಿಷನ್
ಇ) ಲಂಡನ್ ಮಿಷನ್ ಈ) ಸಿರಿಯನ್ ಮಿಷನ್

3. ಇಸ್ರೋದಲ್ಲಿ ಹೊಸದಾಗಿ ಆರಂಭವಾಗಿರುವ ವಾಣಿಜ್ಯ ವಿಭಾಗದ ಹೆಸರೇನು?

ಅ) ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್
ಆ) ಇಂಡಿಯನ್ ಸ್ಪೇಸ್ ವರ್ಲ್ಡ್‌
ಇ) ಇಂಡಿಯನ್ ಸ್ಪೇಸ್ ಕಂಪನಿ ಲಿ.
ಈ) ನ್ಯೂ ಇಂಡಿಯನ್ ಏರೋಸ್ಪೇಸ್ ಕಂಪನಿ ಲಿ.

4. ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮವು ಏನೆಂದು ಪ್ರಸಿದ್ಧವಾಗಿದೆ?

ಅ) ಪ್ಲಾಸ್ಟಿಕ್ ಮುಕ್ತ ಗ್ರಾಮ
ಆ) ಹಸಿವು ಮುಕ್ತ ಗ್ರಾಮ
ಇ) ಸಂಸ್ಕೃತ ಗ್ರಾಮ ಈ) ಆದರ್ಶ ಗ್ರಾಮ

5. ಕರ್ನಾಟಕದ ಯಾವ ಸ್ಥಳದಲ್ಲಿ ‘ದ್ವಾದಶಲಿಂಗ’ಗಳಲ್ಲಿ ಒಂದನ್ನು ಕಾಣಬಹುದು?

ಅ) ಗೋಕರ್ಣ ಆ) ನಂಜನಗೂಡು
ಇ) ಧರ್ಮಸ್ಥಳ ಈ) ಕಳಸ

6. ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯದಲ್ಲಿ ಯಾವ ಲೋಹದ ಪ್ರಮಾಣ ಅತಿಹೆಚ್ಚು ಇರುತ್ತದೆ?

ಅ) ಕ್ಯಾಡ್ಮಿಯಂ ಆ) ಕ್ರೋಮಿಯಂ
ಇ) ಸೀಸ ಈ) ತಾಮ್ರ

7. ಲಾರ್ಡ್ ವಿಲಿಯಂ ಬೆಂಟಿಕ್ ಇವುಗಳಲ್ಲಿ ಯಾವುದನ್ನು ನಿಷೇಧಿಸಿದನು?

ಅ) ಭಿಕ್ಷಾಟನೆ ಆ) ಸತಿಪದ್ಧತಿ
ಇ) ಬಾಲ್ಯವಿವಾಹ ಈ) ಸ್ತ್ರೀ ಶಿಕ್ಷಣ

8. ‘ಸುಖೋಯ್’ ಯಾವ ದೇಶದ ವಿಮಾನ ತಯಾರಿಕಾ ಸಂಸ್ಥೆಯಾಗಿದೆ?

ಅ) ರಷ್ಯಾ ಆ) ಇಟಲಿ ಇ) ಜರ್ಮನಿ
ಈ) ಜಪಾನ್

9. ಸಾಧುಕೋಕಿಲರ ಸಂಗೀತ ನಿರ್ದೇಶನದ ಮೊದಲ ಚಿತ್ರ ಯಾವುದು?

ಅ) ಶ್ ಆ) ಕರ್ಫ್ಯೂ ಇ) ಆಶಾಜ್ವಾಲೆ
ಈ) ಗಂಡುಗಲಿ

10. ‘ರುಡ್ ಸೆಟ್’ ಎಂಬ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೊದಲಿಗೆ ಆರಂಭವಾದದ್ದು ಯಾವ ಸ್ಥಳದಲ್ಲಿ?

ಅ) ಮಲ್ಪೆ ಆ) ಉಡುಪಿ ಇ) ಉಜಿರೆ ಈ) ಬೆಳ್ತಂಗಡಿ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1.ಇಳಿಜಾರು ನೆಲ 2. ವಿಮಾನ ಶಾಸ್ತ್ರ 3. ಕುಮಾರ ವ್ಯಾಸ 4. ಲೆಫ್ಟಿನೆಂಟ್ ಕರ್ನಲ್ 5. ವಿನೋಬಾ ಭಾವೆ 6. ಅಲೆಗ್ಸಾಂಡರ್ ಡ್ಯೂಮಾ 7. ಗುಂಗಾಡು 8.ನರಸಿಂಹ ರಾಜ ಒಡೆಯರ್ 9. ಜಗ್ಗಲಿಗೆ 10.ಕೊಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT