ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್‌ ಸಂಭ್ರಮ: ಟರ್ಕೀಸ್‌ನ ಸುಲ್ತಾನಳಿಗೆ ಆನ್‌ಲೈನ್‌ನಲ್ಲಿ ಹೆಚ್ಚಿನ ಬೇಡಿಕೆ

Last Updated 13 ಮೇ 2021, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರತಿ ಬಾರಿ ರಂಜಾನ್‌ಗೆ ಹೊಸ ವಸ್ತ್ರ ವಿನ್ಯಾಸದ ಟ್ರೆಂಡ್‌ ಕಂಡು ಬರುತ್ತದೆ. ಈ ಬಾರಿ ಕೋವಿಡ್‌ ನಡುವೆಯೂ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿನ ಮುಸ್ಲಿಂ ಯುವತಿಯರ, ಮಕ್ಕಳ ಗಮನ ಸೆಳೆದಿದೆ ‌ಹಲಿಮಾ ಸುಲ್ತಾನ ಉಡುಪು.

ಉಣ್ಣೆ, ವೆಲ್ವೆಟ್‌, ಬ್ರೊಕೇಟ್‌, ಟಫೆಟಾ, ಹತ್ತಿ, ರೇಷ್ಮೆಯಂತಹ ಬಟ್ಟೆಗಳಿಂದ ಹೊಲಿದ, ಮುತ್ತು, ಹರಳು, ಸಣ್ಣ ಸಣ್ಣ ಕನ್ನಡಿ, ಕುಂದನ್‌ನ ಕುಸುರಿಯಿಂದ ಕೂಡಿದ ಕಫ್ತಾನ್‌, ಅದರ ಮೇಲೆ ಯೆಲೆಕ್‌, ತಲೆಗೆ ಬಾಷ್ಲಿಕ್ಸ್‌, ವಿಶಾಲವಾಗಿ ಹರಡುವ ಲೆಹೆಂಗಾ. ಇದಕ್ಕೆ ಮತ್ತಷ್ಟು ಸೌಂದರ್ಯ ತುಂಬಲು ಸುಂದರ ವಿನ್ಯಾಸದ ಬೆಲ್ಟ್‌....

ಅಡಿಯಿಂದ ಮುಡಿವರೆಗೂ, ಮೈತುಂಬ ಚಿತ್ತಾರಗಳಿಂದ ಕೂಡಿದ ಈ ವಸ್ತ್ರ ವಿನ್ಯಾಸ ಹಲಿಮಾ ಸುಲ್ತಾನ ವಸ್ತ್ರ ಎಂದೇ ಪ್ರಸಿದ್ಧಿಯಾಗಿದೆ. ಸಾಂಪ್ರದಾಯಿಕ ವಾಸ್ತುಶಿಲ್ಪವೇ ಮೂಡಿದಂತಹ ವಿನ್ಯಾಸದಿಂದ ಕೂಡಿದ ಈ ವಸ್ತ್ರ ಧರಿಸಿದರೆ ಟರ್ಕೀಸ್‌ ಕಲಾಕೃತಿಯೇ ಕಣ್ಣ ಮುಂದೆ ಓಡಾಡಿದಂತೆ ಭಾಸವಾಗುತ್ತದೆ.

ಪೆಪ್ಲುಮ್‌, ವೆಲ್ವೇಟ್‌ನ ಸ್ಟ್ರೇಟ್‌ ಕಟ್‌ ಫ್ರಾಕಿಗೆ, ಸೀಕ್ರೆಟ್‌ ಪ್ಯಾಂಟ್‌ (ಪೆನ್ಸಿಲ್‌ ಬಾಟಂ), ವಿಶಾಲವಾದ ಲೆಹೆಂಗಾ. ಉಡುಪಿನ ಹಿಂಭಾಗವೂ ವಿನ್ಯಾಸ ಭರಿತ. ಉದ್ದನೆಯ ವಿಭಿನ್ನ ಶೈಲಿಯ ಕೋಟ್‌, ಟರ್ಕೀಸ್‌ನಲ್ಲಿ ಬಾಷ್ಲಿಕ್ಸ್‌ (ತಾಜ್‌) ಎಂದು ಕರೆಯುವ ಟೊಪ್ಪಿ ಈ ವಸ್ತ್ರ ವಿನ್ಯಾಸ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಮೊಣಕೈಯಿಂದ ಮಣಿಕಟ್ಟಿನವರೆಗೆ ಸುಂದರ ಗುಂಡಿಗಳನ್ನು ಹೊಂದಿರುವ ಉದ್ದನೆ ತೋಳಿನ ಕಫ್ತಾನ್‌ (ನಿಲುವಂಗಿ) ನೋಡಿದವರ ಕಣ್ಣು ಕೋರೈಸುತ್ತದೆ.

ಸದ್ಯ ಹೈದರಾಬಾದ್‌ ಬಜಾರ್‌, ಆನ್‌ಲೈನ್‌ನಲ್ಲಿ ಬೇಡಿಕೆ ಜೋರಿದೆ. ಕೋವಿಡ್‌, ಲಾಕ್‌ಡೌನ್‌ ಕಾರಣ ಹಬ್ಬದ ಸಂಭ್ರಮ ಕಮರಿದೆ. ಕನಸಿನ ಸುಲ್ತಾನಳಂತೆ ಕಾಣಲು ಬಯಸಿದ್ದವರ ಕನಸಿಗೆ ತಣ್ಣೀರು ಎರಚಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT