ದುಬೈ: 2021ರಲ್ಲಿ ನಡೆಯ ಬೇಕಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ತೆರಿಗೆ ವಿನಾಯಿತಿ ನೀಡಲು ಸರ್ಕಾರವು ಒಪ್ಪಿಗೆ ನೀಡದಿದ್ದರೆ, ಆತಿಥ್ಯ ವಹಿಸುವ ಅವಕಾಶವನ್ನು ಭಾರತ ಕಳೆದುಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಇದರ ಬೆನ್ನಲ್ಲೇ, ಇದೇ ಸಮಯದಲ್ಲಿ ಇತರೆ ರಾಷ್ಟ್ರಗಳಲ್ಲಿ ಟೂರ್ನಿಯನ್ನು ಆಯೋಜಿಸುವ ಸಂಬಂಧ ಐಸಿಸಿ ಸ್ಥಳ ಹುಡುಕಾಟ ಆರಂಭಿಸಿದೆ.

ಶುಕ್ರವಾರ ಇಲ್ಲಿ ನಡೆದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಭೆಯಲ್ಲಿ ‘ತೆರಿಗೆ ವಿನಾಯಿತಿ’ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ನಿಲುವಿನ ಕುರಿತು ತೀವ್ರ ‘ಕಳಕಳಿ’ ವ್ಯಕ್ತವಾಯಿತು. ಈ ವಿಚಾರವಾಗಿ, ಬಿಸಿಸಿಐ ನೆರವಿನಿಂದ ಭಾರತ ಸರ್ಕಾರದ ಜೊತೆಗೆ ಮಾತುಕತೆ ಮುಂದುವರಿಸುವುದಾಗಿ ಐಸಿಸಿ ತಿಳಿಸಿದೆ.

‘ಭಾರತದಲ್ಲಿ ನಡೆಯುವ ಟೂರ್ನಿಗೆ ತೆರಿಗೆ ವಿನಾಯಿತಿ ನೀಡುವ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆದಿದೆ. ಅತ್ಯಂತ ದೊಡ್ಡದಾದ ಕಾರ್ಯಕ್ರಮಕ್ಕೆ ತೆರಿಗೆ ವಿನಾಯಿತಿ ನೀಡುವ ಸಾಮಾನ್ಯ ಪದ್ಧತಿಯನ್ನು ಮುಂದುವರಿಸುವ ಬಗ್ಗೆ ಬಿಸಿಸಿಐ ಹಾಗೂ ಐಸಿಸಿಯೂ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಿದೆ’ ಎಂದು ಐಸಿಸಿ ತನ್ನ ತಿಳಿಸಿದೆ.

ಅಫ್ಘಾನಿಸ್ತಾನ ಅಥವಾ ಐರ್ಲೆಂಡ್‌ಗೆ ಸ್ಥಳಾಂತರ?

ಒಂದು ವೇಳೆ ಕೇಂದ್ರ ಸರ್ಕಾರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆಯೋಜನೆಗೆ ತೆರಿಗೆ ವಿನಾಯಿತಿ ನೀಡದೆ ಹೋದರೆ ಅಫ್ಘಾನಿಸ್ತಾನ ಅಥವಾ ಐರ್ಲೆಂಡ್‌ಗೆ ಟೂರ್ನಿ ಸ್ಥಳಾಂತರಿಸಲು ಐಸಿಸಿ ನಿರ್ಧರಿಸಿದೆ.

ಐಸಿಸಿ 2017ರ ಜೂನ್‌ನಲ್ಲಿ ಪೂರ್ಣ ಪ್ರಮಾಣ ಕ್ರಿಕೆಟ್ ಆಡಲು ಈ ರಾಷ್ಟ್ರಗಳಿಗೂ ಅನುಮತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.