ನವದೆಹಲಿ (ಪಿಟಿಐ): ಭಾರತದ ಯೂಕಿ ಭಾಂಬ್ರಿ ಪುರುಷರ ಸಿಂಗಲ್ಸ್ ವಿಭಾಗದ ಎಟಿಪಿ ರ‍್ಯಾಂಕಿಂಗ್‌ನಲ್ಲಿ 11 ಸ್ಥಾನಗಳಲ್ಲಿ ಮೇಲಕ್ಕೇರುವ ಮೂಲಕ 101ನೇ ಸ್ಥಾನ ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಚೆನ್ನೈ ಓಪನ್ ಟೆನಿಸ್ ಟೂರ್ನಿಯಲ್ಲಿ ಯೂಕಿ ರನ್ನರ್ ಅಪ್ ಆಗಿದ್ದರು. ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಜೋರ್ಡನ್ ಥಾಮ್ಸನ್ ಎದುರು ಸೋತಿದ್ದರು. ಈ ಟೂರ್ನಿಯಲ್ಲಿ ಅವರು 48 ರ‍್ಯಾಂಕಿಂಗ್ ಪಾಯಿಂಟ್ಸ್‌ಗಳನ್ನು ಗಳಿಸಿದ್ದರು.

ಭಾರತದ ಸಿಂಗಲ್ಸ್ ಆಟಗಾರರಲ್ಲಿ ಯೂಕಿ ಅಗ್ರ ರ‍್ಯಾಂಕಿಂಗ್ ಸ್ಥಾನ ಹೊಂದಿದ್ದಾರೆ. ನಂತರದ ಸ್ಥಾನಗಳಲ್ಲಿ ರಾಮಕುಮಾರ್ ರಾಮನಾಥನ್ (140ನೇ ಸ್ಥಾನ), ಸುಮಿತ್ ನಗಾಲ್ (216), ಪ್ರಜ್ಞೇಶ್ ಗುಣೇಶ್ವರನ್ (242) ಇದ್ದಾರೆ. 2015ರಲ್ಲಿ ಯೂಕಿ 88ನೇ ಸ್ಥಾನಕ್ಕೆ ಏರುವ ಮೂಲಕ ವೃತ್ತಿಜೀವನದ ಶ್ರೇಷ್ಠ ರ‍್ಯಾಂಕಿಂಗ್ ಸ್ಥಾನ ಪಡೆದಿದ್ದಾರೆ.

ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ 20ನೇ ಸ್ಥಾನದೊಂದಿಗೆ ಭಾರತದ ಅಗ್ರ ರ‍್ಯಾಂಕಿಂಗ್ ಆಟಗಾರ ಎನಿಸಿದ್ದಾರೆ. ಬಳಿಕ ದಿವಿಜ್ ಶರಣ್ (42), ಲಿಯಾಂಡರ್ ಪೇಸ್ (49), ಪೂರವ್ ರಾಜ (57) ಇದ್ದಾರೆ.

ಡಬ್ಲ್ಯುಟಿಎ ವಿಭಾಗದಲ್ಲಿ ಅಂಕಿತಾ ರೈನಾ ಭಾರತದ ಅಗ್ರರ‍್ಯಾಂಕಿಂಗ್ ಆಟಗಾರ್ತಿ ಎನಿಸಿದ್ದಾರೆ. ಅವರು 255ನೇ ಸ್ಥಾನ ಹೊಂದಿದ್ದಾರೆ. ಸಾನಿಯಾ ಮಿರ್ಜಾ ಡಬಲ್ಸ್ ವಿಭಾಗದಲ್ಲಿ 14ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.