ಶುಕ್ರವಾರ, ಅಕ್ಟೋಬರ್ 18, 2019
26 °C

ವಿಜಯಪುರ: ವಾರ್ಷಿಕ ಕ್ರೀಡಾಕೂಟ

Published:
Updated:
Deccan Herald

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜಿನಲ್ಲಿ ಜೆನಿತ್ ವಾರ್ಷಿಕ ಕ್ರೀಡಾಕೂಟ ಈಚೆಗೆ ನಡೆಯಿತು.

ಕ್ರೀಡಾಕೂಟಕ್ಕೆ ಚಾಲನೆ ನೀಡಿದ ವಿ.ಆರ್.ಬೀಡು ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ವೃತ್ತಿಯ ಜತೆಗೆ ಪ್ರವೃತ್ತಿಯನ್ನು ಹೊಂದುವುದು ಅವಶ್ಯಕ. ತರಬೇತಿದಾರರ ಮಾರ್ಗದರ್ಶನವನ್ನು ಪಡೆದುಕೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರತಿಭೆಯನ್ನು ತೋರಿಸಬೇಕು. ಪ್ರತಿನಿತ್ಯ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಪ್ರತಿಯೊಬ್ಬರು ತಮ್ಮ ಆರೋಗ್ಯ ವೃದ್ಧಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಪಕುಲಪತಿ ಡಾ.ಎಂ.ಎಸ್.ಬಿರಾದಾರ, ಪ್ರಾಚಾರ್ಯ ಡಾ.ಎಸ್.ಪಿ.ಗುಗ್ಗರಿಗೌಡರ, ಡಾ.ಜೆ.ಜಿ.ಅಂಬೇಕರ, ಎಸ್.ಎಸ್.ಕೋರಿ, ತೇಜಶ್ವಿನಿ ವಲ್ಲಭ, ಡಾ.ಗಿರೀಶ ಕೆ.ಕುಲ್ಲೊಳ್ಳಿ, ಡಾ.ವಿಜಯಕುಮಾರ ಕಲ್ಯಾಣಪ್ಪಗೋಳ, ಡಾ.ಆನಂದ ಅಂಬಲಿ, ಡಾ.ವಿಕಾಸ ದೇಸಾಯಿ, ಡಾ.ಸಂದೀಪ ಪಾಟೀಲ, ಡಾ.ಅರುಣಾ ಬಿರಾದಾರ, ಎಚ್.ಕೆ.ವಿನಯ, ಪ್ರಶಾಂತ ಹಜೇರಿ, ಸಾಗರ ಪಾಟೀಲ, ನವೀನ ಕನಕರಾಯ ಇತರರಿದ್ದರು.

Post Comments (+)