ಬುಧವಾರ, ಮೇ 25, 2022
31 °C

ಬ್ಯಾಸ್ಕೆಟ್‌ಬಾಲ್‌: ಕರ್ನಾಟಕ ತಂಡಕ್ಕೆ ಅರವಿಂದ್ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದಕ್ಷಿಣ ವಲಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕದ ಪುರುಷ ಮತ್ತು ಮಹಿಳೆಯರ ತಂಡಗಳನ್ನು ಪ್ರಕಟಿಸಲಾಗಿದೆ.

ದಕ್ಷಿಣ ವಲಯ ಚಾಂಪಿಯನ್‌ಷಿಪ್‌ ಡಿಸೆಂಬರ್ 13ರಿಂದ 17ರವರೆಗೆ ಚೆನ್ನೈನಲ್ಲಿ ನಡೆಯಲಿದೆ. ರಾಜ್ಯ ಪುರುಷರ ತಂಡಕ್ಕೆ ಅರವಿಂದ್ ನಾಯಕರಾಗಿದ್ದರೆ, ಮಹಿಳಾ ತಂಡದ ಸಾರಥ್ಯವನ್ನು ಭೂಮಿಕಾ ಅವರು ವಹಿಸಲಿದ್ದಾರೆ.

ತಂಡಗಳು: ಪುರುಷರು: ಅರವಿಂದ್‌ (ನಾಯಕ), ಅನಿಲ್‌ ಕುಮಾರ್‌, ಹರೀಶ್ ಮುತ್ತು ಕುಮಾರ್‌ (ಬ್ಯಾಂಕ್‌ ಆಫ್‌ ಬರೋಡಾ), ಮನು ಥಾಮಸ್‌, ಜಿನು ಥಾಮಸ್‌ ಮತ್ತು ರಾಜಶೇಖರ್‌ (ಎಂಇಜಿ ಮತ್ತು ಸೆಂಟರ್‌), ಅಭಿಷೇಕ್ ಗೌಡ (ಸದರ್ನ್‌ ಬ್ಲ್ಯೂಸ್‌), ಶಶಾಂಕ್ ರೈ, ಅಶ್ವಿಜ್‌ ವಿ. (ಮಂಗಳೂರು ಬಿ.ಸಿ), ಮನೋಜ್ ಕುಮಾರ್‌ (ಕ್ರೀಡಾ ವಸತಿನಿಲಯ, ಬೆಂಗಳೂರು), ಪ್ರತ್ಯಾಂಶು ಥೋಮರ್‌ (ಯಂಗ್ ಒರಾಯನ್ಸ್ ಎಸ್‌ಸಿ), ಅಚಿಂತ್ಯ ಕೃಷ್ಣ (ಬೀಗಲ್ಸ್). ಕೋಚ್‌: ತಾಂಕ್‌ಚಾನ್‌,
ವ್ಯವಸ್ಥಾಪಕ: ಪ್ರಭುದೇವ್‌.

ಮಹಿಳೆಯರು: ಭೂಮಿಕಾ (ನಾಯಕಿ), ಮಾನಸಾ (ಕ್ರೀಡಾ ಶಾಲೆ, ವಿದ್ಯಾನಗರ), ಸಂಜನಾ, ಮೇಖಲಾ ಗೌಡ, ಚಂದನಾ (ಬೀಗಲ್ಸ್), ಗ್ರೀಷ್ಮಾ ಎನ್, ಪಾವನಿ ಎಸ್ (ಮೌಂಟ್ಸ್ ಕ್ಲಬ್) ಹರಿಣಿ, ಸಂಧ್ಯಾ (ಕೆ.ಎಸ್.ಹೆಗ್ಡೆ, ನಿಟ್ಟೆ) ಅನಘಾ ನಾಗರಾಜನ್ (ಜೆಎಸ್‌ಸಿ) ಸಹನಾ (ಕ್ರೀಡಾ ವಸತಿನಿಲಯ, ಮೈಸೂರು) ಲೇಖನಾ ಎಂ. (ಯಂಗ್ ಒರಾಯನ್ಸ್ ಎಸ್‌ಸಿ). ಕೋಚ್‌: ಶ್ರೀನಿವಾಸ ಮೂರ್ತಿ, ವ್ಯವಸ್ಥಾಪಕಿ: ಅಂಚೆ ಅಶ್ವಥಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು