ಗುರುವಾರ , ಮೇ 13, 2021
19 °C
ಎಐಟಿಎ 14 ವರ್ಷದೊಳಗಿನವರ ಟೆನಿಸ್ ಟೂರ್ನಿ

ಟೆನಿಸ್ ಟೂರ್ನಿ| ಆರ್ಯ, ಸ್ನಿಗ್ಧಾಗೆ ಪ್ರಶಸ್ತಿ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಉತ್ತಮ ಆಟವಾಡಿದ ಅಗ್ರಶ್ರೇಯಾಂಕದ ಆರ್ಯ ಗಣಪತಿ ಹಾಗೂ ಸ್ನಿಗ್ಧಾ ಕಾಂತ ಅವರು ಎಐಟಿಎ 14 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದ ಪ್ರಶಸ್ತಿಗಳನ್ನು ಗೆದ್ದುಕೊಂಡರು.

ಇಲ್ಲಿಯ ಟ್ರಾನ್ಸ್‌ಫಾರ್ಮ್‌ ಟೆನಿಸ್ ಅಕಾಡೆಮಿಯಲ್ಲಿ ನಡೆದ ಟೂರ್ನಿಯ ಬಾಲಕರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಆರ್ಯ 6-2, 6-3ರಿಂದ ಗಂಧರ್ವ ಜಿ.ಕೆ. ಅವರನ್ನು ಸೋಲಿಸಿದರು. ಬಾಲಕಿಯರ ವಿಭಾಗದಲ್ಲಿ ಅಗ್ರಶ್ರೇಯಾಂಕದ ಜಿನಾಹ್ ಅಂಬರ್ ಸಾಲಾರ್‌ ಅವರನ್ನು 4-6, 6-3, 6-4ರಿಂದ ಮಣಿಸಿದ ಸ್ನಿಗ್ಧಾ ಪ್ರಶಸ್ತಿಗೆ ಮುತ್ತಿಟ್ಟರು. ಸ್ನಿಗ್ಧಾ ಇಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದರು.

ಬಾಲಕರ ಡಬಲ್ಸ್ ವಿಭಾಗದ ಪ‍್ರಶಸ್ತಿಯು ನಿಖಿಲ್ ಶ್ರೀನಿವಾಸ್‌–ಲತೀಶ್‌ ಕೊಂಬಿಲ ಅವರ ಪಾಲಾಯಿತು. ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಈ ಜೋಡಿ 6-2, 7-5ರಿಂದ ಗಂಧರ್ವ ಜಿ.ಕೆ–ಪ್ರಣೀತ್ ಗೋಗಿನೇನಿ ಅವರನ್ನು ಮಣಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.